ವಿದ್ಯಾರ್ಥಿಗಳು ಬಲಿಷ್ಟರಾದಾಗ ಮಾತ್ರ ರಾಷ್ಟ್ರ ಅಭಿವೃದ್ದಿಯಾಗಲು ಸಾಧ್ಯ: ಯು.ಟಿ.ಖಾದರ್

ವಿದ್ಯಾರ್ಥಿಗಳು ಬಲಿಷ್ಟರಾದಾಗ ಮಾತ್ರ ರಾಷ್ಟ್ರ ಅಭಿವೃದ್ದಿಯಾಗಲು ಸಾಧ್ಯ: ಯು.ಟಿ.ಖಾದರ್

Nov 23, 2015 12:56:05 PM (IST)

ಮೂಡುಬಿದರೆ: ಇಂದಿನ ಯುವಕರು,ವಿದ್ಯಾರ್ಥಿಗಳು ಬಲಿಷ್ಟರಾದಾಗ ಮಾತ್ರ ರಾಷ್ಟ್ರ ಅಭಿವೃದ್ದಿಯಾಗಲು ಸಾಧ್ಯ. ಇಂದಿನ ವಿದ್ಯಾರ್ಥಿ ಸಮುದಾಯಕ್ಕೆ ವಿದ್ಯೆಯ ಜೊತೆಗೆ ಕ್ರೀಡೆ ಬಹು ಮುಖ್ಯ. ವಿದ್ಯಾರ್ಥಿಗಳ ಕ್ರೀಡಾ ಹಿತಸಕ್ತಿಯ ಮೇಲೆ ಕಾಳಾಜಿ ವಹಿಸಿ ಸರ್ಕಾರ ವಿವಿಧ ಯೋಜನೆಗಳನ್ನು ಕಲ್ಪಿಸುತ್ತಿದೆ. ವಿದ್ಯೆ,ಕ್ರೀಡೆಯ ಜೊತೆಗೆ ಆರೋಗ್ಯದ ಬಗ್ಗೆಯೂ ಕಾಳಾಜಿ ವಹಿಸಬೇಕು ಎಂದು ಕರ್ನಾಟಕ ರಾಜ್ಯದ  ಆರೊಗ್ಯ ಸಚಿವರಾದ ಯು.ಟಿ.ಖಾದರ್ ಹೇಳಿದರು.


ಇಲ್ಲಿನ ಸ್ವರಾಜ ಮೈದಾನದಲ್ಲಿ ದ.ಕ ಜಿ.ಪಂ ಸಾರ್ವಜನಿಕ ಶಿಕ್ಷಣ ಇಲಾಖೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ದೈಹಿಕ ಶಿಕ್ಷಣ ಶಿಕ್ಷಕರ ಸಂಘ ಹಾಗೂ ಆಳ್ವಾಸ್ ಫ್ರೌಢಶಾಲೆ ಪುತ್ತಿಗೆ ಇದರ ಸಂಯುಕ್ತ ಆಶ್ರಯದಲ್ಲಿ ಮೂರು ದಿನಗಳ ಕಾಲ ನಡೆಯುತ್ತಿರುವ ರಾಜ್ಯಮಟ್ಟದ 17 ವಯೋಮಿತಿಯ ಫ್ರೌಢಶಾಲಾ ಬಾಲಕ ಬಾಲಕಿಯರ ಅಥ್ಲೆಟಿಕ್ ಕ್ರೀಡಾಕೂಟದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.  

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ರಾಜ್ಯದ ಯುವ ಸಬಲಿಕರಣ,ಕ್ರೀಡೆ ಹಾಗೂ ಮೀನುಗಾರಿಕೆ ಸಚಿವ ಅಭಯಚಂದ್ರ ಜೈನ್ ಮಾತಾನಾಡಿ ಇಂದಿನ ಕ್ರೀಡಾಪಟುಗಳು ಬಲಿಷ್ಟ ಭಾರತದ ಕ್ರೀಡಾಶಿಲ್ಪಿಗಳು, ಈ ಕ್ರೀಡಾಪಟುಗಳು ನಮ್ಮ ರಾಜ್ಯದ ಆಸ್ತಿ. ಇವರನ್ನು ಉತ್ತೇಜಿಸುವ ನಿಟ್ಟಿನಲ್ಲಿ ಜಿಲ್ಲೆ, ತಾಲೂಕು ಕೇಂದ್ರಗಳಲ್ಲಿ ತರಬೇತಿಯನ್ನು ನೀಡಲಾಗುತ್ತಿದೆ. ಇದೇ ಸಂದರ್ಭದಲ್ಲಿ ಈ ಆಥ್ಲೆಟಿಕ್ಸ್ ಕ್ರೀಡಾಕೂಟಕ್ಕೆ ರಾಜ್ಯ ಸರ್ಕಾರದಿಂದ 3 ಲಕ್ಷ ರೂ.ಗಳ ವಿಶೇಷ ಅನುದಾನವನ್ನು ನೀಡುವುದಾಗಿ ಹೇಳಿದರು.

ಕ್ರೀಡಾಕೂಟದಲ್ಲಿ ರಾಜ್ಯದ ಒಟ್ಟು 34 ಕ್ರೀಡಾ ತಂಡಗಳು ಭಾಗವಹಿಸಿದ್ದವು. ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಆಶಾ ತಿಮ್ಮಪ್ಪ ಗೌಡ, ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕ ಎಸ್ ಅಂಗಾರ,ಶಾಸಕರುಗಳಾದ ಜೆ.ಆರ್ ಲೊಬೋ, ಬಿ.ಎ ಮೊದಿನ್ ಬಾವ, ಶಕುಂತಲ ಟಿ.ಶೆಟ್ಟಿ, ವಿಧಾನ ಪರಿಷತ್ ಸದಸ್ಯರುಗಳಾದ ಐವನ್ ಡಿಸೋಜಾ, ಕೋಟ ಶ್ರೀನಿವಾಸ ಪೂಜಾರಿ, ಪ್ರತಾಪ್ ಚಂದ್ರಶೆಟ್ಟಿ, ದ.ಕದ ಜಿ.ಪಂ ಉಪಾದ್ಯಕ್ಷ ಸತೀಶ್ ಕುಂಪಲ, ಮಾಜಿ ಸಚಿವ ಅಮರನಾಥ ಶೆಟ್ಟಿ, ಅದಾನಿ ಗ್ರೂಪ್ ಎಕ್ಸಿಕ್ಯೂಟಿವ್ ಡೈರೆಕ್ಟರ್ ಕಿಶೋರ್ ಆಳ್ವ,  ದ.ಕ ಜಿ.ಪಂ. ಮುಖ್ಯ ಕಾರ್ಯನಿರ್ವಹಕಾರಿ ಪಿ.ಐ ಶ್ರೀವಿದ್ಯಾ  ಹಾಗೂ ಮತ್ತಿತ್ತರು ಉಪಸ್ಥಿತರಿದ್ದರು.

 

More Images