ಕೇರಳದ ಗಡಿಭಾಗದಲ್ಲಿ ತೀವ್ರ ತಪಾಸಣೆ

ಕೇರಳದ ಗಡಿಭಾಗದಲ್ಲಿ ತೀವ್ರ ತಪಾಸಣೆ

HSA   ¦    Feb 22, 2021 11:29:37 AM (IST)
ಕೇರಳದ ಗಡಿಭಾಗದಲ್ಲಿ ತೀವ್ರ ತಪಾಸಣೆ

ಮಂಗಳೂರು: ಕೋವಿಡ್-19 ಸೋಂಕಿತರ ಸಂಖ್ಯೆಯು ಕೇರಳದಲ್ಲಿ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದ ಗಡಿಭಾಗಗಳಲ್ಲಿ ತೀವ್ರ ತಪಾಸಣೆ ಆರಂಭಿಸಲಾಗಿದೆ.

ಕೇರಳದಿಂದ ಬರುವಂತಹ ಚೆಕ್ ಪೋಸ್ಟ್ ಗಳಲ್ಲಿ ಆರೋಗ್ಯ ತಪಾಸಣೆ ನಡೆಸಲಾಗುತ್ತಿದೆ. ಕೇರಳದಿಂದ ಕರ್ನಾಟಕಕ್ಕೆ ಬರುವವರಿಗೆ ಕೋವಿಡ್ ನೆಗೆಟಿವ್ ಪ್ರಮಾಣಪತ್ರ ಕಡ್ಡಾಯ ಮಾಡಲಾಗಿದೆ.

ಚೆಕ್ ಪೋಸ್ಟ್ ನಲ್ಲಿ ತಹಸೀಲ್ದಾರ್, ಡಿಎಚ್ ಒ, ಪೊಲೀಸರು ಕೇರಳದಿಂದ ಬರುವವರನ್ನು ವಿಚಾರಣೆ ಮಾಡುತ್ತಿರುವರು.