ಉಡುಪಿ: ಮೂವರು ವಿದ್ಯಾರ್ಥಿಗಳಲ್ಲಿ ಕೊರೋನಾ ಸೋಂಕಿನ ಶಂಕೆ

ಉಡುಪಿ: ಮೂವರು ವಿದ್ಯಾರ್ಥಿಗಳಲ್ಲಿ ಕೊರೋನಾ ಸೋಂಕಿನ ಶಂಕೆ

HSA   ¦    Mar 13, 2020 02:38:19 PM (IST)
ಉಡುಪಿ: ಮೂವರು ವಿದ್ಯಾರ್ಥಿಗಳಲ್ಲಿ ಕೊರೋನಾ ಸೋಂಕಿನ ಶಂಕೆ

ಉಡುಪಿ: ಕೊರೋನಾ ವೈರಸ್ ಸೋಂಕು ಲಕ್ಷಣಗಳು ಕಂಡುಬಂದಿರುವಂತಹ ಮೂವರು ವಿದ್ಯಾರ್ಥಿಗಳನ್ನು ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಈ ಮೂವರು ವಿದ್ಯಾರ್ಥಿಗಳು ಮಣಿಪಾಲ ವಿಶ್ವವಿದ್ಯಾನಿಲಯದವರು. ಅಮೆರಿಕಾ, ಮಲೇಷ್ಯಾ ಮತ್ತು ಕುವೈತ್ ನಿಂದ ಇವರು ಬಂದಿದ್ದರು ಎಂದು ವರದಿಗಳು ತಿಳಿಸಿವೆ.

ಇವರ ಗಂಟಲು ದ್ರವದ ಮಾದರಿಯನ್ನು ಬೆಂಗಳೂರಿಗೆ ಕಳುಹಿಸಲಾಗಿದೆ ಮತ್ತು ವರದಿಯಲ್ಲಿ ನಿರೀಕ್ಷೆಯಲ್ಲಿದ್ದೇವೆ ಎಂದು ವೈದ್ಯರು ತಿಳಿಸಿದ್ದಾರೆ.

ಈ ಮೂವರು ವಿದ್ಯಾರ್ಥಿಗಳನ್ನು ಐಸೊಲೇಟೆಡ್ ವಾರ್ಡ್ ಗಳಲ್ಲಿ ಇಡಲಾಗಿದೆ.