ಕಿಡಿಗೇಡಿಗಳಿಂದ ಹೋಟೆಲ್ ಗೆ ಬೆಂಕಿ: 70 ಸಾವಿರ ರೂ. ನಷ್ಟ

ಕಿಡಿಗೇಡಿಗಳಿಂದ ಹೋಟೆಲ್ ಗೆ ಬೆಂಕಿ: 70 ಸಾವಿರ ರೂ. ನಷ್ಟ

Nov 27, 2015 11:46:40 AM (IST)

ಕಾಸರಗೋಡು: ಕುಟುಂಬ ಶ್ರೀ ಸಂಘಟನೆಯ ಹೋಟೆಲ್ ಗೆ ಕಿಡಿಗೇಡಿಗಳು ಬೆಂಕಿ ಹಚ್ಚಿದ ಘಟನೆ ಕಾನ್ಚಾ೦ಗಾಡ್ ನಲ್ಲಿ ನಡೆದಿದೆ.

ಹೋಟೆಲ್ ಸಂಪೂರ್ಣ ಹೊತ್ತಿ ಉರಿದ ಘಟನೆ ಬುಧವಾರ ತಡರಾತ್ರಿ ನಡೆದಿದೆ ಎನ್ನಲಾಗಿದೆ. ನಗರಸಭೆಯ ಸುಮಾರು 70 ಸಾವಿರ ರೂ. ನಷ್ಟ ಉಂಟಾಗಿದೆ. ರಾತ್ರಿ ಸ್ಪೋಟ ಶಬ್ದ ಸ್ಥಳಿಯರಿಗೆ ಕೇಳಿತ್ತು. ಆದರೆ  ಸ್ಥಳೀಯರು ಇದನ್ನು ಗಂಭೀರವಾಗಿ ತೆಗೆದು ಕೊಂಡಿರಲಿಲ್ಲ. ಆದರೆ ಬೆಳಿಗ್ಗೆ ನೋಡಿದಾಗ ಕೃತ್ಯ ಬೆಳಕಿಗೆ ಬಂದಿದೆ. ಘಟನಾ ಸ್ಥಳಕ್ಕೆ ಕಾನ್ಚಾ೦ಗಾಡ್ ಪೊಲೀಸರು ತೆರಳಿದ್ದು, ತನಿಖೆ ಆರಂಭಿಸಿದ್ದಾರೆ   
ಘಟನಾ ಸ್ಥಳಕ್ಕೆ ಕಾನ್ಚಾ೦ಗಾಡ್ ಶಾಸಕ ಇ. ಚಂದ್ರಶೇಖರನ್,  ಕಾನ್ಚಾನ್ಗಾಡ್ ನಗರ ಸಭಾ ಅಧ್ಯಕ್ಷ  ವಿ.ವಿ ರಮೇಶನ್ ಮೊದಲಾದವರು ಭೇಟಿ ನೀಡಿದರು.