ಅಕ್ರಮ ಮರಳು ದಾಸ್ತಾನು ಅಡ್ಡೆಗೆ ದಾಳಿ

ಅಕ್ರಮ ಮರಳು ದಾಸ್ತಾನು ಅಡ್ಡೆಗೆ ದಾಳಿ

Nov 29, 2015 09:45:21 AM (IST)

ಕಾಸರಗೋಡು: ಅಕ್ರಮ ಮರಳು ದಾಸ್ತಾನು ಅಡ್ಡೆಗೆ ಪೊಲೀಸರು ಮತ್ತು ಕಂದಾಯ ಅಧಿಕಾರಿಗಳು ದಾಳಿ ನಡೆಸಿ 140 ಲೋಡ್ ಮರಳನ್ನು ವಶಪಡಿಸಿಕೊಂಡ ಘಟನೆ ಮಂಜೇಶ್ವರ ಸಮೀಪದ ಕೆದಂಬಾಡಿಯಲ್ಲಿ ನಡೆದಿದೆ.

ಖಾಸಗಿ ವ್ಯಕ್ತಿಯೋರ್ವರ ಸ್ಥಳದಲ್ಲಿ ಮರಳನ್ನು ದಾಸ್ತಾನಿಡಲಾಗಿತ್ತು. ಒಂದು ವಾರದ ಅವಧಿಯಲ್ಲಿ ಎರಡನೇ ಬಾರಿ ದಾಳಿ ನಡೆಯುತ್ತಿದೆ.  ಮೂರು ದಿನಗಳ ಹಿಂದೆ ದಾಳಿ ನಡೆಸಿ 30 ಲಕ್ಷ ರೂ.  ಮೌಲ್ಯದ  ಮರಳನ್ನು  ವಶಪಡಿಸಿಕೊಂಡಿತ್ತು. ಕರ್ನಾಟಕದಿಂದ ಒಳದಾರಿಯಾಗಿ ಅಕ್ರಮವಾಗಿ ಮರಳು ತಂದು ಇಲ್ಲಿ ದಾಸ್ತಾನಿಡಲಾಗುತ್ತಿದ್ದು, ಇಲ್ಲಿಂದ ರಾತ್ರಿ ಸಮಯದಲ್ಲಿ ವಿವಿಧ ಕಡೆಗೆ ಮರಳನ್ನು ಸಾಗಾಟ ಮಾಡುವ ಬೃಹತ್ ಜಾಲವೇ  ಕಾರ್ಯಾಚರಿಸುತ್ತಿದೆ.