ಬಂಟ್ವಾಳ ತಾಲೂಕು ಮಟ್ಟದ ಪಿಲಿಗೊಬ್ಬು ಸ್ಪರ್ಧೆ

ಬಂಟ್ವಾಳ ತಾಲೂಕು ಮಟ್ಟದ ಪಿಲಿಗೊಬ್ಬು ಸ್ಪರ್ಧೆ

MV   ¦    Oct 08, 2019 05:27:17 PM (IST)
ಬಂಟ್ವಾಳ ತಾಲೂಕು ಮಟ್ಟದ ಪಿಲಿಗೊಬ್ಬು ಸ್ಪರ್ಧೆ

ಬಂಟ್ವಾಳ: ಬಿರುವೆರ್ ಕುಡ್ಲ ಇದರ ಬಂಟ್ವಾಳ ಘಟಕದ ಆಶ್ರಯದಲ್ಲಿ ಪ್ರಥಮ ಬಾರಿಗೆ ಬಂಟ್ವಾಳ ತಾಲೂಕು ಮಟ್ಟದ ಪಿಲಿಗೊಬ್ಬು ಸ್ಪರ್ಧೆ ಮಂಗಳವಾರ ಬಿ.ಸಿ.ರೋಡಿನ ಸ್ಪರ್ಶಾ ಕಲಾಮಂದಿರದಲ್ಲಿ ನಡೆಯಿತು.

ಬಂಟ್ವಾಳ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಕೆ. ಸೇಸಪ್ಪ ಕೋಟ್ಯಾನ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸರಕಾರಿ ಶಾಲೆ ಉಳಿಸಿ ಬೆಳೆಸಿ ಸಮಿತಿ ರಾಜ್ಯಾಧ್ಯಕ್ಷ ಪ್ರಕಾಶ್ ಅಂಚನ್, ಕಾರ್ಯಕ್ರಮದ ರುವಾರಿ ಹಾಗೂ ಬಿರುವೆರ್ ಕುಡ್ಲ ಇದರ ಬಂಟ್ವಾಳ ತಾಲೂಕು ಘಟಕದ ಸಂಚಾಲಕ  ಭುವನೇಶ್ ಪಚ್ಚಿನಡ್ಕ ಉಪಸ್ಥಿತರಿದ್ದರು. ಸ್ಪರ್ಧೆಯ ತೀರ್ಪುಗಾರರಾಗಿದ್ದ  ತುಳು ಜಾನಪದ ವಿದ್ವಾಂಸ ಕೆ.ಕೆ.ಪೇಜಾವರ, ರಾಷ್ಟ್ರೀಯ ದೇಹದಾಢ್ರ್ಯ ಪಟು ವೆಂಕಟೇಶ್ ಭಟ್, ಪ್ರಸಿದ್ದ ತಾಸೆ ವಾದಕ ಕೇಶವ ಶೆಟ್ಟಿಗಾರ್ ಹಾಗೂ ಕಾರ್ಯಕ್ರಮ ನಿರೂಪಕ ನವೀನ್ ಶೆಟ್ಟಿ ಉಪಸ್ಥಿತರಿದ್ದರು.

ಮಾಜಿ ಸಚಿವ ಬಿ.ರಮಾನಾಥ ರೈ ಹುಲಿ ಕುಣಿತ ಸ್ಪರ್ಧಾ ಕಾರ್ಯಕ್ರಮವನ್ನು ವೀಕ್ಷಿಸಿ ಸ್ಫರ್ಧಾಳುಗಳನ್ನು ಅಭಿನಂದಿಸಿ ಮಾತನಾಡಿ ಧಾರ್ಮಿಕ ನೆಲೆ ಗಟ್ಟಿನಲ್ಲಿ ಆರಂಭಗೊಂಡ ಹುಲಿ ವೇಷ ಕುಣಿತ ಇಂದು ಅವನತಿಯ ಹಾದಿಯಲ್ಲಿದೆ. ಸಾಂಪ್ರದಾಯಿಕ ಹುಲಿಕುಣಿತಗಳು ಮರೆಯಾಗುತ್ತಿದ್ದು ಅವುಗಳನ್ನು ಉಳಿಸಿ ಬೆಳೆಸುವ ಅನಿವಾರ್ಯತೆ ಇದೆ. ಕರಾವಳಿಯ ಜಾನಪದ ಕಲೆಯನ್ನು ಉಳಿಸುವ ಪ್ರಯತ್ನವನ್ನು ಬಿರ್ವೆರ್ ಕುಡ್ಲ ಇದರ ಬಂಟ್ವಾಳ ಘಟಕ ಮಾಡುತ್ತಿರುವುದು ಅಭಿನಂದನೀಯ  ಎಂದು ಶುಭ ಹಾರೈಸಿದರು.

ಶಾಸಕ ರಾಜೇಶ್ ನಾಯ್ಕ್ ಭೇಟಿ ನೀಡಿ ಶುಭಕೋರಿದರು.  ಬಂಟ್ವಾಳ ಕೋ.ಅಪರೇಟಿವ್ ಬ್ಯಾಂಕಿನ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ  ಬೇಬಿ ಕುಂದರ್, ಉದ್ಯಮಿಗಳಾದ ಚಂದ್ರಹಾಸ ಶೆಟ್ಟಿ,  ಸಂಜೀವ ಪೂಜಾರಿ, ಲಯನ್ಸ್ ಕ್ಲಬ್ ಅಧ್ಯಕ್ಷ ಶ್ರೀನಿವಾಸ ಪೂಜಾರಿ, ಪ್ರಕಾಶ್ ಶೆಟ್ಟಿ ಶ್ರೀ ಶೈಲ, ಜೇಸಿಐ ಬಂಟ್ವಾಳದ ಅಧ್ಯಕ್ಷ ಯತೀಶ್ ಸುವರ್ಣ, ಪೂರ್ವಾಧ್ಯಕ್ಷ ಲೋಕೇಶ್ ಸುವರ್ಣ, ಸುನೀಲ್ ಕಾಯರ್‍ಮಾರ್ ಮೊದಲಾದವರು ಉಪಸ್ಥಿತರಿದ್ದರು.

ನಾಗ ಸುಜ್ಞಾನ ಫ್ರೆಂಡ್ಸ್ ಕಲ್ಲಡ್ಕ, ಎಂಸಿಸಿ ಬಾಯ್ಸ್ ಮೆಲ್ಕಾರ್,  ಗಂಗು ಫ್ರೆಂಡ್ಸ್ ಮೊಡಂಕಾಪು, ಪುರಲ್ದ ಪ್ಪೆನ ಮೋಕೆದ ಬೊಳ್ಳಿಲು ಪೊಳಲಿ ಟೈಗರ್ಸ್, ಗೆಳೆಯರ ಬಳಗ ಭಂಡಾರಿಬೆಟ್ಟು ಹಾಗೂ ಬಿರುವೆರ್ ಫ್ರೆಂಡ್ಸ್ ಬೆಂಜನಪದವು ತಂಡಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದವು. ಬಂಟ್ವಾಳ ತಾಲೂಕಿನಲ್ಲಿ ಮೊದಲ ಬಾರಿಗೆ ಆಯೋಜನೆಗೊಂಡ ಹುಲಿ ವೇಷ ಕುಣಿತವನ್ನು ನೋಡಲು  ಅಪಾರ ಸಂಖ್ಯೆಯಲ್ಲಿ ಪ್ರೇಕ್ಷಕರು ಹಾಜರಿದ್ದು. ಹುಲಿವೇಷಧಾರಿಗಳ ಕಸರತ್ತುಗಳನ್ನು ನೋಡಿ ಸಂಭ್ರಮಿಸಿದರು. ರಾಜೇಶ್ ಸುವರ್ಣ ಕಾರ್ಯಕ್ರಮ ನಿರೂಪಿಸಿದರು.