ಕೆಐಒಎನ್ ಐಸಿಎ ಕಾರ್ಯಾಧ್ಯಕ್ಷರಾಗಿ ಹರಿಕೃಷ್ಣ ಬಂಟ್ವಾಳ್ ನೇಮಕ

ಕೆಐಒಎನ್ ಐಸಿಎ ಕಾರ್ಯಾಧ್ಯಕ್ಷರಾಗಿ ಹರಿಕೃಷ್ಣ ಬಂಟ್ವಾಳ್ ನೇಮಕ

HSA   ¦    Jun 13, 2020 03:31:22 PM (IST)
ಕೆಐಒಎನ್ ಐಸಿಎ ಕಾರ್ಯಾಧ್ಯಕ್ಷರಾಗಿ ಹರಿಕೃಷ್ಣ ಬಂಟ್ವಾಳ್ ನೇಮಕ

ಮಂಗಳೂರು: ಬಿಜೆಪಿ ನಾಯಕ ಹರಿಕೃಷ್ಣ ಬಂಟ್ವಾಳ್ ಅವರನ್ನು ರಾಜ್ಯ ಸರ್ಕಾರ ಸ್ವಾಮ್ಯದ ಕರ್ನಾಟಕ ರಾಜ್ಯ ವಿದ್ಯುಜ್ಜನಿತ ಅಭಿವೃದ್ಧಿ ನಿಗಮ ನಿಯಮಿತ(ಕೆಐಒಎನ್ ಐಸಿಎ)ದ ಕಾರ್ಯಾಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ.

ಶುಕ್ರವಾರ ಈ ಬಗ್ಗೆ ರಾಜ್ಯ ಸರ್ಕಾರವು ಆದೇಶ ಹೊರಡಿಸಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಪ್ರಮುಖ ಬಿಲ್ಲವ ನಾಯಕರಾಗಿರುವ ಹರಿಕೃಷ್ಣ ಬಂಟ್ವಾಳ್ ಅವರು ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರ್ಪಡೆಗೊಂಡ ಬಳಿಕ ರಾಜ್ಯದಲ್ಲಿ ಬಿಜೆಪಿ ಸರ್ಕಾರವು ಅಧಿಕಾರಕ್ಕೆ ಬಂದ ಬಳಿಕ ಒಂದು ಸ್ಥಾನಮಾನ ನೀಡಬಹುದು ಎಂದು ಊಹಿಸಲಾಗಿತ್ತು. ಈಗ ಅದು ನಿಜವಾಗಿದೆ.

ಇದು ಸರ್ಕಾರಿ ಸ್ವಾಮ್ಯದ ಸಂಸ್ಥೆಯಾಗಿದ್ದು, ಐಟಿ ಮತ್ತು ಮಾನವ ಸಂಪನ್ಮೂಲ ಸೇವೆಯನ್ನು ಸರ್ಕಾರಿ ಇಲಾಖೆಗಳಿಗೆ ಇದು ಒದಗಿಸುತ್ತದೆ.