ಮಂಗಳೂರು ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ದೋಷ: ಇಬ್ಬರು ಪೈಲಟ್ ಗಳ ಲೈಸನ್ಸ್ ಅಮಾನತು

ಮಂಗಳೂರು ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ದೋಷ: ಇಬ್ಬರು ಪೈಲಟ್ ಗಳ ಲೈಸನ್ಸ್ ಅಮಾನತು

HSA   ¦    Feb 13, 2020 07:35:43 PM (IST)
ಮಂಗಳೂರು ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ದೋಷ: ಇಬ್ಬರು ಪೈಲಟ್ ಗಳ ಲೈಸನ್ಸ್ ಅಮಾನತು

ಮಂಗಳೂರು: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ಲೋಪ ಎಸಗಿರುವ ಸ್ಪೈಸ್ ಜೆಟ್ ನ ಇಬ್ಬರು ಪೈಲಟ್ ಗಳ ಪರವಾನಗಿ(ಲೈಸನ್ಸ್)ಯನ್ನು ನಾಗರಿಕ ವಿಮಾನಯಾನ ನಿರ್ದೇಶಾಲಯ(ಡಿಜಿಸಿಎ)ದ ನಾಲ್ಕುವರೆ ತಿಂಗಳ ಕಾಲ ಅಮಾನತು ಮಾಡಿದೆ.

ಲ್ಯಾಂಡಿಂಗ್ ವೇಳೆ ತಪ್ಪು ಮಾಡಿದ ಪರಿಣಾಮವಾಗಿ ವಿಮಾನವು ಎಡಕ್ಕೆ ಜಾರಿ ರನ್ ವೇ ಬದಿಯ ದೀಪಗಳಿಗೆ ಹಾಣಿ ಮಾಡಿತ್ತು. ಇದರ ಬಗ್ಗೆ ತನಿಖೆ ನಡೆಸಿರುವ ಡಿಜಿಸಿಎ ಪೈಲಟ್ ಗಳ ಅಮಾನತಿಗೆ ಕ್ರಮ ತೆಗೆದುಕೊಂಡಿದೆ ಎಂದು ಪ್ರಕಟಣೆ ತಿಳಿಸಿದೆ.

ದುಬೈನಿಂದ ಬಂದಿದ್ದ 737 ಸ್ಪೈಸ್ ಜೆಟ್ ವಿಮಾನವು ಲ್ಯಾಂಡಿಂಗ್ ವೇಳೆ ತೊಂದರೆಗೆ ಒಳಗಾಗಿತ್ತು. ಸ್ಪೈಸ್ ಜೆಟ್ ಈಗಾಗಲೇ ಇಬ್ಬರು ಪೈಲಟ್ ಗಳನ್ನು ಅಮಾನತು ಮಾಡಿದೆ.