ನಾವೂರು ಗ್ರಾಮದ ಕೇಲ್ತಾಜೆ ನಿವಾಸಿ ಕೋವಿಡ್‌ಗೆ ತುತ್ತಾಗಿ ಸೌದಿ ಅರೇಬಿಯಾದಲ್ಲಿ ನಿಧನ

ನಾವೂರು ಗ್ರಾಮದ ಕೇಲ್ತಾಜೆ ನಿವಾಸಿ ಕೋವಿಡ್‌ಗೆ ತುತ್ತಾಗಿ ಸೌದಿ ಅರೇಬಿಯಾದಲ್ಲಿ ನಿಧನ

DA   ¦    Jun 29, 2020 06:16:47 PM (IST)
ನಾವೂರು ಗ್ರಾಮದ ಕೇಲ್ತಾಜೆ ನಿವಾಸಿ ಕೋವಿಡ್‌ಗೆ ತುತ್ತಾಗಿ ಸೌದಿ ಅರೇಬಿಯಾದಲ್ಲಿ ನಿಧನ

ಬೆಳ್ತಂಗಡಿ; ಸೌದಿ ಅರೇಬಿಯಾದ ಜಿಝಾನ್ ಎಂಬಲ್ಲಿನ ಬೈಶ್ ನ ಪೆಟ್ರೋಫೇಕ್ ಕಂಪೆನಿಯಲ್ಲಿ ಕೆಲಸದಲ್ಲಿದ್ದ ತಾಲೂಕಿನ ನಾವೂರು ಗ್ರಾಮದ ಕೇಳ್ತಾಜೆ ನಿವಾಸಿಯೊಬ್ಬರು ಶಾಸಕೋಶದ ತೊಂದರೆ ಮತ್ತು ಕೋವಿಡ್ -19 ಗೆ ತುತ್ತಾಗಿ ಜೂ. 28 ರಂದು ಅಲ್ಲೇ ನಿಧನರಾಗಿದ್ದಾರೆ.

ಶ್ವಾಸಕೋಶದ ಸಮಸ್ಯೆ ಯಿಂದ ಜಿಝಾನ್ "ಅಲ್ ಹಯಾ" ಆಸ್ಪತ್ರೆಗೆ ದಾಖಲಾಗಿದ್ದ ಅವರು ಇಂದು ಮೃತಪಟ್ಟಿದ್ದಾಗಿ ಅವರ ಕುಟುಂಬ ವರ್ಗಕ್ಕೆ ಮಾಹಿತಿ ಬಂದಿದೆ.

ಸದ್ಯ ಅವರ ಪಾರ್ಥಿವ ಶರೀರ ಜಿಝಾನ್ ನ ಅಲ್ ಹಯಾತ್ ಆಸ್ಪತ್ರೆ ಯಲ್ಲಿದೆ. ಅವರ ಅಂತ್ಯ ಸಂಸ್ಕಾರ ವಿಧಿಗಳು ಸೌದಿ ಅರೇಬಿಯಾದಲ್ಲೇ ನಡೆಯಲಿದೆ. ಅಲ್ಲೇ ಆಸುಪಾಸಿನಲ್ಲಿ ಕೆಲಸದಲ್ಲಿರುವ ಅನಿವಾಸಿ ಭಾರತೀಯರು, ಪರಿಚಿತರು ಭಾಗಿಯಾಗಿ ಕಾರ್ಯಕ್ಕೆ ನೇತೃತ್ವ ನೀಡಲಿದ್ದಾರೆಂದು ತಿಳಿದು ಬಂದಿದೆ.