ನಿಲ್ಲಿಸಿದ್ದ ಕಾರೊಂದರಿಂದ ಗಾಂಜಾ ವಶ: ಇಬ್ಬರ ಬಂಧನ

ನಿಲ್ಲಿಸಿದ್ದ ಕಾರೊಂದರಿಂದ ಗಾಂಜಾ ವಶ: ಇಬ್ಬರ ಬಂಧನ

Dec 01, 2015 10:24:57 AM (IST)

ಕಾಸರಗೋಡು: ಸಂಶಯಾಸ್ಪದವಾಗಿ ರಸ್ತೆ ಬದಿ ನಿಲ್ಲಿಸಿದ್ದ ಕಾರೊಂದರಿಂದ 4.9ಕಿಲೋ ಗಾಂಜಾವನ್ನು ವಶಪಡಿಸಿಕೊಂಡಿರುವ ಬದಿಯಡ್ಕ ಠಾಣಾ ಪೊಲೀಸರು ಇಬ್ಬರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಓರ್ವ  ಪರಾರಿಯಾಗಿದ್ದಾನೆ.

ಬಂಧಿತರನ್ನು ಸೀತಾ೦ಗೋಳಿ ಎಕೆಜಿ ನಗರದ  ಫೈಜಲ್ ( 27) ಮತ್ತು ಪಟ್ಲದ ಅಬ್ದುಲ್ ರೌಫ಼್ (29) ಗುರುತಿಸಲಾಗಿದೆ. ಆದಿತ್ಯವಾರ ರಾತ್ರಿ 11.30ರ ಸುಮಾರಿಗೆ ಬದಿಯಡ್ಕ ಪೊಲೀಸರು ಗಸ್ತು ತಿರುಗುತ್ತಿದ್ದಾಗ  ಸೀತಾ೦ಗೋಳಿಯಿಂದ ಕಾಸರಗೋಡಿಗೆ ತೆರಳುವ ರಸ್ತೆ ಬದಿ ಸಂಶಯಾಸ್ಪದವಾಗಿ ಕಂಡು ಬಂದ ಕಾರಿನ ಬಳಿ ತೆರಳಿದಾಗ ಒಬ್ಬ ಪರಾರಿಯಾದನು. ಇಬ್ಬರನ್ನು ಪ್ರಶ್ನಿಸಿದ್ದಾಗ ತದ್ವಿದ್ದ ಉತ್ತರ ನೀಡಿದ್ದು, ಇದರಿಂದ ಕಾರನ್ನು  ಪರಿಶೀಲಿಸಿದಾಗ ಅದರಲ್ಲಿ ಗಾಂಜಾ ಪತ್ತೆಯಾಗಿದೆ. ಶಬೀರ್ ಎಂಬಾತ ಪರಾರಿಯಾಗಿದ್ದಾನೆ. ಇವರು ಗಾಂಜಾ ಸಾಗಾಟಗಾರರು ಎಂದು  ಪೊಲೀಸರು ತಿಳಿಸಿದ್ದಾರೆ. ಇವರು ಕಾಸರಗೋಡು ಜಿಲ್ಲೆಯ ಏಜೆಂಟ್ ರ್ ಗಳಿಗೆ  ಗಾಂಜಾ ಸರಬರಾಜು ಮಾಡುವ ತಂಡದವರು ಎನ್ನಲಾಗಿದೆ. ಬಂಧಿತರನ್ನು ಹೆಚ್ಚಿನ ವಿಚಾರಣೆಗೊಳಪಡಿಸಲಾಗಿದೆ.