ಉಡುಪಿಯಲ್ಲಿ ವ್ಯಕ್ತಿಯೊಬ್ಬನಿಗೆ ಕೊರೋನಾ ಸೋಂಕು ದೃಢ

ಉಡುಪಿಯಲ್ಲಿ ವ್ಯಕ್ತಿಯೊಬ್ಬನಿಗೆ ಕೊರೋನಾ ಸೋಂಕು ದೃಢ

HSA   ¦    Mar 25, 2020 01:42:07 PM (IST)
ಉಡುಪಿಯಲ್ಲಿ ವ್ಯಕ್ತಿಯೊಬ್ಬನಿಗೆ ಕೊರೋನಾ ಸೋಂಕು ದೃಢ

ಉಡುಪಿ: ದುಬೈನಿಂದ ಬಂದ ವ್ಯಕ್ತಿಯೊಬ್ಬನಲ್ಲಿ ಕೊರೋನಾ ವೈರಸ್ ಇರುವುದು ದೃಢಪಟ್ಟಿದೆ.

ಮಾ.18ರಂದು ದುಬೈನಿಂದ ಬಂದಿದ್ದ 34ರ ಹರೆಯದ ವ್ಯಕ್ತಿ ಮಾ.23ರಂದು ಜಿಲ್ಲಾಸ್ಪತ್ರೆಗೆ ಜ್ವರದ ಕಾರಣದಿಂದಾಗಿ ದಾಖಲಾಗಿದ್ದ. ಆತನ ಗಂಟಲು ದ್ರವದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಿಕೊಡಲಾಗಿತ್ತು.

ವರದಿಯಲ್ಲಿ ಕೊವಿಡ್-19 ಪಾಸಿಟಿವ್ ಎಂದು ದೃಢಪಟ್ಟಿದೆ ಎಂದು ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ಚಂದ್ರಸೂಡ ಅವರು ಮಾಹಿತಿ ನೀಡಿದ್ದಾರೆ.