ಎಸ್.ಡಿ.ಎಂ ಝೇಂಕಾರ 2020: ಪುತ್ತೂರು ವಿವೇಕಾನಂದ ಕಾಲೇಜಿಗೆ ಸಮಗ್ರ ಪ್ರಶಸ್ತಿ

ಎಸ್.ಡಿ.ಎಂ ಝೇಂಕಾರ 2020: ಪುತ್ತೂರು ವಿವೇಕಾನಂದ ಕಾಲೇಜಿಗೆ ಸಮಗ್ರ ಪ್ರಶಸ್ತಿ

Feb 13, 2020 07:47:03 PM (IST)
ಎಸ್.ಡಿ.ಎಂ ಝೇಂಕಾರ 2020: ಪುತ್ತೂರು ವಿವೇಕಾನಂದ ಕಾಲೇಜಿಗೆ ಸಮಗ್ರ ಪ್ರಶಸ್ತಿ

ಉಜಿರೆ: ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರ ಆಯೋಜಿಸಿದ ಎರಡು ದಿನಗಳ ‘ಝೇಂಕಾರ-2020’ ರಾಷ್ಟ್ರೀಯ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಉತ್ಸವದ ಸಮಗ್ರ ಪ್ರಶಸ್ತಿಯನ್ನು ಪುತ್ತೂರಿನ ವಿವೇಕಾನಂದ ಕಾಲೇಜಿನ ತಂಡ ತನ್ನದಾಗಿಸಿಕೊಂಡಿದೆ.

ಎಸ್.ಡಿ.ಎಂ ಪದವಿ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಎಸ್.ಸತೀಶ್ಚಂದ್ರ, ಪರೀಕ್ಷಾಂಗ ಕುಲಸಚಿವರಾದ ಡಾ.ಬಿ.ಸಂಪತ್‍ಕುಮಾರ್, ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರದ ಡೀನ್ ಡಾ. ಬಿ. ಗಣಪಯ್ಯ ಮತ್ತು ಉತ್ಸವದ ಸಂಯೋಜಕ ಸುವೀರ್ ಜೈನ್ ಅವರು ವಿಜೇತರಿಗೆ ಬಹುಮಾನ ಮತ್ತು ಪ್ರಶಸ್ತಿ ಪತ್ರ ವಿತರಿಸಿದರು.

ಝೇಂಕಾರ ಉತ್ಸವದ ಸಮಾರೋಪ ಸಮಾರಂಭದಲ್ಲಿ ಎಸ್.ಡಿ.ಎಮ್ ಕಾಲೇಜಿನ ಪ್ರಾಂಶುಪಾಲ ಸತೀಶ್ಚಂದ್ರ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವಿದ್ಯಾರ್ಥಿಗಳ ಶಿಸ್ತು, ಆಸಕ್ತಿ, ಪಾಲುಗೊಳ್ಳುವಿಕೆ ನೋಡಿದಾಗ ಯುವಜನತೆಯ ಬಗ್ಗೆ ಭರವಸೆ ಮೂಡುತ್ತದೆ. ಭಾರತಕ್ಕೆ ಉತ್ತಮ ಭವಿಷ್ಯವಿದೆ ಎಂಬುದು ಇಂಥ ಸಾಂಸ್ಕೃತಿಕ ಕಾರ್ಯಕ್ರಮಗಳಿಂದ ಸಾಬೀತಾಗುತ್ತದೆ ಎಂದು ಹೇಳಿದರು.

ಪರೀಕ್ಷಾಂಗ ಕುಲಸಚಿವರಾದ ಡಾ.ಬಿ. ಸಂಪತ್ ಕುಮಾರ್ ಮುಖ್ಯ ಅತಿಥಿಯಾಗಿ ಮಾತನಾಡಿದರು. ಕಾಲೇಜಿನ ಹಳೆಬೇರು ಹೊಸಚಿಗುರುಗಳು ಸೇರಿ ಈ ಉತ್ಸವದ ಯಶಸ್ವಿಗೆ ಶ್ರಮಿಸಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.

ವಿಜೇತರ ವಿವರ

ಮಿಸ್ಟರ್ ಅಂಡ್ ಮಿಸ್ ಝೇಂಕಾರ್ :

ಮಿಸ್ಟರ್ ಝೇಂಕಾರ್ - ಪುತ್ತೂರು ವಿವೇಕಾನಂದ ಕಾಲೇಜಿನ ಸಂಪತ್ ಕುಮಾರ್ ರೈ

ಮಿಸ್ ಝೇಂಕಾರ್ - ಪುತ್ತೂರು ವಿವೇಕಾನಂದ ಕಾಲೇಜಿನ ಭಾಗ್ಯಲಕ್ಷ್ಮಿ ಬಿ.

 

ಗಲ್ಲಿ ಕ್ರಿಕೆಟ್ :

ಶೃಂಗೇರಿಯ ಜೆ.ಸಿ.ಬಿ.ಎಮ್ ಕಾಲೇಜು (ಪ್ರಥಮ)

ಕೊಣಾಜೆಯ ಮಂಗಳೂರು ವಿಶ್ವವಿದ್ಯಾನಿಲಯ (ದ್ವಿತೀಯ)

 

ಬ್ರೈನಿ ಬಿಗೆಟರ್ (ಕ್ವಿಜ್) :

ಪುತ್ತೂರಿನ ವಿವೇಕಾನಂದ ಕಾಲೇಜು (ಪ್ರಥಮ)

ಮೂಡಬಿದಿರೆಯ ಆಳ್ವಾಸ್ ಪದವಿ ಕಾಲೇಜು (ದ್ವಿತೀಯ)

ರೀಸೆಂಟ್ ರಿಮಿಕ್ಸ್ :

ಶೃಂಗೇರಿಯ ಜೆ.ಸಿ.ಬಿ.ಎಮ್ ಕಾಲೇಜು (ಪ್ರಥಮ)

ಉಜಿರೆಯ ಎಸ್.ಡಿ.ಎಮ್ ಕಾಲೇಜು (ದ್ವಿತೀಯ)

 

ಯೂತ್ ಆನ್ ರ್ಯಾಂಪ್ :

ಹಾಸನದ ಎನ್.ಡಿ.ಆರ್.ಕೆ ಸ್ನಾತಕೋತ್ತರ ಕೇಂದ್ರ (ಪ್ರಥಮ)

ಮೈಸೂರಿನ ಜೆ.ಎಸ್.ಎಸ್. ಕಾಲೇಜು (ದ್ವಿತೀಯ)

 

ಸಿಂಫನಿ - ಟ್ಯೂನ್ಸ್ ಆಫ್ ಲೈಫ್ :

ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜು (ಪ್ರಥಮ)

ಪುತ್ತೂರಿನ ವಿವೇಕಾನಂದ ಕಾಲೇಜು (ದ್ವಿತೀಯ)

 

ಸ್ಪೀಕ್ ಫಾರ್ ನೇಷನ್ :

ಮಂಗಳೂರಿನ ಸಂತ ಆಗ್ನೆಸ್ ಕಾಲೇಜು (ಪ್ರಥಮ)

ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜು (ದ್ವಿತೀಯ)

 

ಮಾಕ್ ಸಿ.ಐ.ಡಿ. :

ಮಂಗಳೂರಿನ ಸಂತ ಆಗ್ನೆಸ್ ಕಾಲೇಜು (ಪ್ರಥಮ)

ಧಾರವಾಡದ ಜೆ.ಎಸ್.ಎಸ್ ಕಾಲೇಜು (ದ್ವಿತೀಯ)

 

ಸ್ಪಾಟ್ ಫೊಟೊಗ್ರಫಿ :

ಮೈಸೂರಿನ ಜೆ.ಎಸ್.ಎಸ್. ಕಾಲೇಜು (ಪ್ರಥಮ)

ಮೈಸೂರಿನ ಮಹಾರಾಜ ಕಾಲೇಜು (ದ್ವಿತೀಯ)

 

ಜಾಮ್ :

ಎಸ್.ವಿ.ಎಸ್ ಬಂಟ್ವಾಳ (ಪ್ರಥಮ)

ಸವಣೂರಿನ ವಿದ್ಯಾರಶ್ಮಿ ಪ್ರಥಮ ದರ್ಜೆ ಕಾಲೇಜು (ದ್ವಿತೀಯ)