ಪುತ್ತೂರು ಕಬಕದಲ್ಲಿ ಅನಧಿಕೃತ ಅಂಗಡಿಗಳ ತೆರವು

ಪುತ್ತೂರು ಕಬಕದಲ್ಲಿ ಅನಧಿಕೃತ ಅಂಗಡಿಗಳ ತೆರವು

LG   ¦    Nov 08, 2019 10:30:57 AM (IST)
ಪುತ್ತೂರು ಕಬಕದಲ್ಲಿ ಅನಧಿಕೃತ ಅಂಗಡಿಗಳ ತೆರವು

ಪುತ್ತೂರು: ಪುತ್ತೂರು ವಿಟ್ಲ ರಸ್ತೆಯ ಕಬಕದಲ್ಲಿ ಅನಧಿಕೃತ ಅಂಗಡಿಗಳ ತೆರವು ಕಾರ್ಯಾಚರಣೆ ನ.7ರಂದು ಬೆಳ್ಳಂಬೆಳಗ್ಗೆ ನಡೆಯಿತು.

ಅನಧಿಕೃತ ಅಂಗಡಿಗಳ ತೆರವು ಕುರಿತು ಗ್ರಾ.ಪಂನಿಂದ ಈ ಹಿಂದೆ ನೋಟೀಸ್ ನೀಡಲಾಗಿತ್ತು.

ಆದರೆ ಇದಕ್ಕೆ ಅಂಗಡಿಗಳನ್ನು ತೆರವು ಮಾಡದ ಹಿನ್ನೆಲೆಯಲ್ಲಿ ಕೋರ್ಟ್‍ನಲ್ಲೂ ಪ್ರಕರಣ ದಾಖಲಾಗಿ ಇದೀಗ ಕೋರ್ಟ್ ಆದೇಶದಂತೆ ಅಂಗಡಿಗಳ ತೆರವು ಕಾರ್ಯಾಚರಣೆ ನಡೆಯುತ್ತಿದೆ ಎಂದು ತಿಳಿದು ಬಂದಿದೆ.