ಮಂಗಳೂರಿನಲ್ಲಿ ತುಟ್ಟಿಯಾದ ಮೊಟ್ಟೆ

ಮಂಗಳೂರಿನಲ್ಲಿ ತುಟ್ಟಿಯಾದ ಮೊಟ್ಟೆ

Keerthana Bhat   ¦    Sep 14, 2020 07:31:54 PM (IST)
ಮಂಗಳೂರಿನಲ್ಲಿ ತುಟ್ಟಿಯಾದ ಮೊಟ್ಟೆ

ಮಂಗಳೂರು: ಮಾಂಸ, ಕೋಳಿ ಹಾಗೂ ಮೀನಿನ ದರ ಆಗಸಕ್ಕೆ ಏರುತ್ತಿರುವಂತಲೇ ಬಹು ಪೋಷಕಾಂಶಗಳಿರುವ ಮೊಟ್ಟೆಯ ದರ ಕೂಡ ಈಗ ಏರುತ್ತಲೇ ಇದೆ. ಈ ಬಾರಿ ಪ್ರತಿ ಮೊಟ್ಟೆಗೆ 5.60ರೂ. ಹೋಲ್‍ಸೇಲ್ ಹಾಗೂ ರಿಟೇಲ್ ಮಾರ್ಕೆಟ್‍ನಲ್ಲಿ 6.50 ರೂ. ತಲುಪಿದೆ. ಈ ದರ ಐದು ವರ್ಷದ ಗರಿಷ್ಟ ದರ ಎನ್ನುವುದು ಮೊಟ್ಟೆ ವ್ಯಾಪಾರಿಗಳು ಹಾಗೂ ಗ್ರಾಹಕರ ಅಭಿಪ್ರಾಯ.

ಈ ಬಾರಿ ಬೆಂಗಳೂರು ಮತ್ತು ಮೈಸೂರಿನಲ್ಲಿ ಹೋಲ್‍ಸೆಲ್ ದರ ಒಂದು ಮೊಟ್ಟೆಗೆ 5.20ರೂ ಇದೆ. ಆದರೆ ಮಂಗಳೂರಿನಲ್ಲಿ 5.60ರೂ ತಲುಪಿದೆ. ರಿಟೇಲ್ ಮಾರ್ಕೆಟ್‍ನಲ್ಲಿ ಅದು 6.50ಕ್ಕೆ ತಲುಪಿದೆ. ರಾಜ್ಯದ ಉಳಿದ ಜಿಲ್ಲೆಗಳಲ್ಲಿ ಮೊಟ್ಟೆಯ ದರ 10ರಿಂದ 50 ಪೈಸೆಯವರೆಗೆ ಏರಿಕೆಯಾಗಿದೆ.

ಬೆಂಗಳೂರಿನ ನಂತರ ಅತೀ ಹೆಚ್ಚು ಮೊಟ್ಟೆ ಮಾರಾಟವಾಗುವ ಸ್ಥಳ ಮಂಗಳೂರು. ಮಂಗಳೂರಿನ ಆಹಾರ ಪದ್ದತಿಯಲ್ಲಿ ಮೊಟ್ಟೆಗೆ ಅತೀ ಹೆಚ್ಚು ಮಹತ್ವ ನೀಡಲಾಗುತ್ತದೆ. ಈ ಕಾರಣದಿಂದ ಕೋಳಿ ಹಾಗೂ ಮೊಟ್ಟೆಯ ದರ ಮಂಗಳೂರಿನಲ್ಲಿ ಕೊಂಚ ಜಾಸ್ತಿಯೇ ಇರುತ್ತದೆ ಎನ್ನುತ್ತಾರೆ.