ಗಡಿಭಾಗದ ರಸ್ತೆಯ ಮಣ್ಣು ತೆರವು ಜಿಲ್ಲಾಧಿಕಾರಿ ಜತೆ ಚರ್ಚಿಸಿ ಕ್ರಮ : ಕೋಟ

ಗಡಿಭಾಗದ ರಸ್ತೆಯ ಮಣ್ಣು ತೆರವು ಜಿಲ್ಲಾಧಿಕಾರಿ ಜತೆ ಚರ್ಚಿಸಿ ಕ್ರಮ : ಕೋಟ

GK   ¦    Aug 01, 2020 06:01:05 PM (IST)
ಗಡಿಭಾಗದ ರಸ್ತೆಯ ಮಣ್ಣು ತೆರವು ಜಿಲ್ಲಾಧಿಕಾರಿ ಜತೆ ಚರ್ಚಿಸಿ ಕ್ರಮ : ಕೋಟ

ಸುಳ್ಯ: ಲಾಕ್ ಡೌನ್ ಸಂದರ್ಭದಲ್ಲಿ ಗಡಿಭಾಗದಲ್ಲಿ ರಸ್ತೆಯಲ್ಲಿ ಹಾಕಲಾಗಿರುವ ಮಣ್ಣನ್ನು ತೆರವು ಮಾಡುವ ಕುರಿತು ಜಿಲ್ಲಾಧಿಕಾರಿಗಳ ಜತೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.

ಸುಳ್ಯಕ್ಕೆ ಆಗಮಿಸಿದ ಸಚಿವರು ಸುದ್ದಿಗಾರರ ಜೊತೆ ಮಾತನಾಡಿದರು. ಗಡಿಭಾಗದಲ್ಲಿ ಕೆಲವೆಡೆ ಹಾಕಲಾಗಿದ್ದ ಮಣ್ಣನ್ನು ಈಗಾಗಲೇ ತೆರವು ಮಾಡಲಾಗಿದೆ. ಇನ್ನೂ ಕೆಲವು ಭಾಗದಲ್ಲಿ ಇದೆ. ಇದರ ತೆರವಿಗೆ ಕೂಡಲೇ ಕ್ರಮ ಕೈಗೊಳ್ಳುತ್ತೇವೆ. ಈಗ ಕೇರಳದವರು ಕೂಡಾ ಕೆಲವು ಕಡೆ ಗಡಿಯನ್ನು ಮುಚ್ಚಿದ್ದಾರೆ ಮತ್ತು ಅಂತಾರಾಜ್ಯ ಪ್ರಯಾಣಕ್ಕೆ ನಿರ್ಬಂಧ ಹೇರಿದ್ದಾರೆ. ಗಡಿಯನ್ನು ಪೂರ್ಣವಾಗಿ ತೆರವು ಮಾಡುವ ಬಗ್ಗೆ  ಕಾಸರಗೋಡು ಜಿಲ್ಲಾಡಳಿತದೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಉತ್ತರಿಸಿದರು.

ದೇವಸ್ಥಾನಗಳ ವ್ಯವಸ್ಥಾಪನಾ ಸಮಿತಿಗೆ ಈಗಾಗಲೇ ಅರ್ಜಿಗಳು ಬಂದಿದ್ದು ನೇಮಕ ಪ್ರಕ್ರಿಯೆ ಶೀಘ್ರ ನಡೆಸಲಾಗುವುದು.

ಸುಳ್ಯ ನಗರದ ತ್ಯಾಜ್ಯ ವಿಲೇವಾರಿ ಸಮಸ್ಯೆ ನಮ್ಮ ಗಮನದಲ್ಲಿದೆ. ಕೆಲವೇ ದಿನದಲ್ಲಿ ನಾನು ಮತ್ತೆ ಇಲ್ಲಿಗೆ ಬಂದು ಶಾಸಕರಿದ್ದು ಸಭೆ ನಡೆಸಿ ಶಾಶ್ವತ ಪರಿಹಾರ ಕಂಡುಕೊಳ್ಳಲಾಗುವುದು ಎಂದು ಸಚಿವರು ಹೇಳಿದರು.

ಮಂತ್ರಿ ಮಂಡಲ ವಿಸ್ತರಣೆ, ಪುನರ್ ರಚನೆಯ ಬಗ್ಗೆ ಮುಖ್ಯಮಂತ್ರಿ  ನಿರ್ಧರಿಸುತ್ತಾರೆ. ಹಿರಿಯ ಶಾಸಕರಾದ ಎಸ್.ಅಂಗಾರ ಅವರಿಗೆ ನಿಗಮದಲ್ಲಿ ಸ್ಥಾನ ಸಿಕ್ಕಿಲ್ಲ. ಮುಂದೆ ಸೂಕ್ತವಾದ ದೊಡ್ಡ ಮಟ್ಟದ ಗೌರವ ಸಿಗಬಹುದು ಎಂಬ ನಿರೀಕ್ಷೆ ಇದೆ. ಅಂಗಾರರಿಗೆ ಸಚಿವ ಸ್ಥಾನ ಸಿಗಬೇಕು. ಅವರನ್ನು ನಿಗಮ ಮಂಡಳಿಯಲ್ಲಿ ಪರಿಗಣಿಸದಿದ್ದರೆ ಅದಕ್ಕಿಂತಲೂ ದೊಡ್ಡ ಜವಾಬ್ಧಾರಿ ಹುದ್ದೆ ನೀಡಬಹುದು ಎಂದು ಅವರು ಶಾಸಕ ಎಸ್.ಅಂಗಾರ ಅವರ ಸಚಿವ ಸ್ಥಾನದ ಕುರಿತಾದ ಪ್ರಶ್ನೆಗೆ ಸಚಿವರು ಉತ್ತರಿಸಿದರು.