ಆರ್ಥಿಕ ನಷ್ಟ ; ದಂಪತಿ ಆತ್ಮಹತ್ಯೆ

ಆರ್ಥಿಕ ನಷ್ಟ ; ದಂಪತಿ ಆತ್ಮಹತ್ಯೆ

Jun 09, 2021 12:36:59 PM (IST)
ಆರ್ಥಿಕ  ನಷ್ಟ ; ದಂಪತಿ ಆತ್ಮಹತ್ಯೆ

ಮಂಗಳೂರು: ನಗರದ ಕದ್ರಿ ಪಿಂಟೋಸ್ ಲೇನ್ ನಲ್ಲಿ ದಂಪತಿ ಆತ್ಮಹತ್ಯೆ ಗೆ ಶರಣಾಗಿರುವುದು ಬುಧವಾರ ಬೆಳಗ್ಗೆ ಗಮನಕ್ಕೆ ಬಂದಿದೆ. ಸುರೇಶ್ (62), ಹಾಗೂ ವಾಣಿ (55) ಆತ್ಮಹತ್ಯೆ ಮಾಡಿಕೊಂಡ ದಂಪತಿ. ಇವರ ಕುಟುಂಬಸ್ಥರು ಕೆಳ ಮಹಡಿಯಲ್ಲಿ ವಾಸ ಮಾಡುತ್ತಿದ್ದು, ಮೇಲಿನ ಮಹಡಿಯಲ್ಲಿ ದಂಪತಿ ವಾಸವಿದ್ದರು.
ಸುರೇಶ್ ಮನೆಯ ಎದುರಿನ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದರೆ, ವಾಣಿ ಮನೆಯೊಳಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕದ್ರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಬಾವಿಯಿಂದ ಸುರೇಶ್ ಅವರ ಮೃತ ದೇಹ ತೆಗೆಯಲಾಗಿದೆ. ಮರಣೋತ್ತರ ಪರೀಕ್ಷೆಗೆ ಇಬ್ಬರ ಮೃತದೇಹಗಳನ್ನು ವೆನ್ಲಾಕ್ ಆಸ್ಪತ್ರೆಗೆ ಸಾಗಿಸಲಾಗಿದೆ. ಡೆತ್ ನೋಟ್ ಪೊಲೀಸರಿಗೆ ದೊರಕಿದ್ದು, ಚಿಟ್ ಫಂಡ್ ನಲ್ಲಿ ಉಂಟಾಗಿರುವ ನಷ್ಟದಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಡೆತ್ ನೋಟ್ ನಲ್ಲಿ ಬರೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.