ಯಾಂತ್ರೀಕರಣ ಕೃಷಿಯಿಂದ ರೈತರ ಕಲ್ಯಾಣ: ಪೂಂಜ

ಯಾಂತ್ರೀಕರಣ ಕೃಷಿಯಿಂದ ರೈತರ ಕಲ್ಯಾಣ: ಪೂಂಜ

DA   ¦    Oct 17, 2020 04:06:10 PM (IST)
ಯಾಂತ್ರೀಕರಣ ಕೃಷಿಯಿಂದ ರೈತರ ಕಲ್ಯಾಣ: ಪೂಂಜ

ಬೆಳ್ತಂಗಡಿ: ಯಾಂತ್ರಿಕ ಕೃಷಿಯಿಂದ ಕೂಲಿ ಆಳುಗಳ ಸಮಸ್ಯೆ ನಿವಾರಿಸುವ ಜತೆಗೆ ರೈತರ ಸಮಗ್ರ ಬೇಸಾಯ ಪದ್ಧತಿಗೆ ವೇಗ ನೀಡುವ ನಿಟ್ಟಿನಲ್ಲಿ ಸರಕಾರವು ಹಲವಾರು ಯೋಜನೆಗಳನ್ನು ತಂದಿದೆ. ಇಲಾಖೆಯ ಯೋಜನೆ ಅನುಷ್ಠಾನಗೊಳಿಸುವ ಮೂಲಕ ರೈತರ ಕಲ್ಯಾಣವಾಗಬೇಕು ಎಂದು ಶಾಸಕ ಹರೀಶ್ ಪೂಂಜ ಹೇಳಿದರು.

ಕೃಷಿ ಇಲಾಖೆ, ಬೆಳ್ತಂಗಡಿ ಇದರ 2020-21ನೇ ಸಾಲಿನ ಕೃಷಿ ಯಾಂತ್ರೀಕರಣ ಉಪ ಅಭಿಯಾನ ಯೋಜನೆಯಡಿ ಸಹಾಯ ಧನದಲ್ಲಿ ಅ.16ರಂದು ಬೆಳ್ತಂಗಡಿ ಕೃಷಿ ಇಲಾಖೆ ವಠಾರದಲ್ಲಿ ನಡೆದ ಸಣ್ಣ ಟ್ರ್ಯಾಕ್ಟರ್ ಮತ್ತು ಪವರ್ ಟಿಲ್ಲರ್ ವಿತರಣಾ ಕಾರ್ಯಕ್ರಮದಲ್ಲಿ ಫಲಾನುಫಲಾನುವಿಗಳಿಗೆ ಕೀಲಿ ಕೈ ಹಸ್ತಾಂತರಿಸಿ ಮಾತನಾಡಿದರು.

ರಾಜ್ಯ ಮತ್ತು ಕೇಂದ್ರ ಸರಕಾರದ ವಿಶೇಷ ಗಿರಿಜನ ಯೋಜನೆಯಡಿ ಶೇ.90 ಹಾಗೂ ಸಾಮಾನ್ಯ ಯೋಜನೆಯಡಿ ಶೇ.50 ಸಬ್ಸಿಡಿಯಲ್ಲಿ 6 ಪವರ್ ಟಿಲ್ಲರ್, 2 ಟ್ರ್ಯಾಕ್ಟರ್‌ನ್ನು ಫಲಾನುಭವಿಗಳಿಗೆ ವಿತರಿಸಲಾಯಿತು.

ಪುತ್ತೂರು ಕೃಷಿ ಇಲಾಖೆ ಉಪ ಕೃಷಿ ನಿರ್ದೇಶಕ ಶಿವಶಂಕರ್ ದಾನೆಗೊಂಡರ್, ಬೆಳ್ತಂಗಡಿ ಸಹಾಯಕ ಕೃಷಿ ನಿರ್ದೇಶಕ ರಂಜಿತ್ ಕುಮಾರ್, ತಾಂತ್ರಿಕ ಕೃಷಿ ಅಽಕಾರಿಗಳಾದ ಚಿದಾನಂದ ಎಸ್. ಹುಗಾರ್, ಹುಮೇರ ಜಬೀನ್, ನವೀನ್ ನೆರಿಯಾ, ಇಲಾಖೆ ಸಿಬಂದಿ ಮತ್ತಿತರರು ಉಪಸ್ಥಿತರಿದ್ದರು.