ಜೀವನ್‍ಧಾರ ಸಮಾಜ ಸೇವಾ ಪ್ರತಿಷ್ಠಾನದಿಂದ ಮಹಿಳಾ ದಿನಾಚರಣೆ

ಜೀವನ್‍ಧಾರ ಸಮಾಜ ಸೇವಾ ಪ್ರತಿಷ್ಠಾನದಿಂದ ಮಹಿಳಾ ದಿನಾಚರಣೆ

Mar 14, 2020 02:47:10 PM (IST)
ಜೀವನ್‍ಧಾರ ಸಮಾಜ ಸೇವಾ ಪ್ರತಿಷ್ಠಾನದಿಂದ ಮಹಿಳಾ ದಿನಾಚರಣೆ

ಮಂಗಳೂರು: ಜೀವನ್‍ಧಾರ ಸಮಾಜ ಸೇವಾ ಪ್ರತಿಷ್ಠಾನ ಇದರ ವತಿಯಿಂದ ಶುಕ್ರವಾರ ಸೇಕ್ರೇಡ್ ಹಾಟ್ರ್ಸ್ ಹಿರಿಯ ಪ್ರಾಥಮಿಕ ಶಾಲಾ ಸಭಾಂಗಣದಲ್ಲಿ ವಿಶ್ವ ಮಹಿಳಾ ದಿನಾಚರಣೆಯನ್ನು ನೆರವೇರಿಸಲಾಯಿತು.

ಡಾ. ಭಾಗ್ಯಲಕ್ಷ್ಮಿ, ವೈದ್ಯಕೀಯ ಅಧಿಕಾರಿ, ಬೀಡಿ ಕಾರ್ಮಿಕ ಕಲ್ಯಾಣ ಇಲಾಖೆ ಪಡೀಲ್ ಇವರು ಮುಖ್ಯ ಅತಿಥಿಗಳಾಗಿ ಆಗಮಿಸಿ, ಅಸಂಘಟಿತ ವಲಯದಲ್ಲಿ ದುಡಿಯುತ್ತಿರುವ ಮಹಿಳೆಯರಿಗೆ ಸರಕಾರದಿಂದ ದೊರಕುವ ಸವಲತ್ತುಗಳ ಬಗ್ಗೆ ವಿವರವಾಗಿ ತಿಳಿಸಿ ಸ್ವಾವಲಂಬನೆಯ ಜೀವನವನ್ನು ನಡೆಸಲು ಕರೆ ನೀಡಿದರು.

 ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಡಾ. ವಿದ್ಯಾ ವಿನುತ ಡಿಸೋಜಾ, ಉಪನ್ಯಾಸಕಿ ಸಂತ ಅಲೋಶಿಯಸ್ ಕಾಲೇಜು, ಸಮಾಜ ಅಧ್ಯಯನ ವಿಭಾಗ ಇವರು ಮಹಿಳೆ ಮತ್ತು ಮಾತು ಎಂಬ ವಿಷಯದ ಮೇಲೆ ಮಹಿಳೆಯರೊಡನೆ ಸಂಭಾಷಣೆ ನಡೆಸಿ ನೈಜ ಜೀವನದಲ್ಲಿ ಸಮರ್ಪಕವಾದ ಮಾತುಕತೆಯ ಮಹತ್ವವನ್ನು ತಿಳಿಸಿದರು.

 ಜೀವನ್‍ಧಾರಾ ಸಮಾಜ ಸೇವಾ ಪ್ರತಿಷ್ಠಾನದ ಕಾರ್ಯದರ್ಶಿ ಭಗಿನಿ ಅನ್ನ ಮರಿಯರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಹಿಳೆಯರು ಸಮಾಜದಲ್ಲಿ ಸಕ್ರಿಯವಾಗಿ ಭಾಗವಹಿಸಿ  ಸಮಾಜ ಕಟ್ಟುವ ಕೆಲಸದಲ್ಲಿ ತೊಡಗಬೇಕೆಂದು ಕರೆನೀಡಿದರು.

ಜೀವನ್‍ಧಾರಾ ಸಮಾಜ ಸೇವಾ ಕೇಂದ್ರದ ನಿರ್ದೇಶಕಿ ಹಾಗೂ ಸಂತ ಕ್ರೂಜ್ ಕಾನ್ವೆಂಟ್‍ನ ಮುಖ್ಯಸ್ಥೆಯಾಗಿರುವ ಭಗಿನಿ ರೇಖಾ ಬಿ.ಎಸ್‍ರವರು ಸ್ವಾಗತಿಸಿ ಹಾಗೂ ಭಗಿನಿ ಐಡ ಜಾನೆಟ್‍ರವರು ವರದಿಯನ್ನು ವಾಚಿಸಿದರು.

ವೇದಿಕೆ ಕಾರ್ಯಕ್ರಮದ ನಂತರ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಆಟೋಟ ಸ್ಪರ್ದೆಗಳನ್ನು ಏರ್ಪಡಿಸಿ ವಿಜೇತರಾದವರಿಗೆ ಅಧ್ಯಕ್ಷರು ಬುಹುಮಾನ ವಿತರಿಸಿದರು.

ಸಂತ ಅಲೋಶಿಯಸ್ ಕಾಲೇಜು, ಸಮಾಜ ಅಧ್ಯಯನ ವಿಭಾಗದ ವಿದ್ಯಾರ್ಥಿ ರಾಹುಲ್ ರವರು ಕಾರ್ಯಕ್ರಮವನ್ನು ನಿರೂಪಿಸಿದರು. ಹೊಲಿಗೆ ತರಬೇತಿ ಮಹಿಳೆಯರು ಪ್ರಾರ್ಥನೆ ಗೀತೆಯೊಂದಿಗೆ ಕಾರ್ಯಕ್ರಮವನ್ನು ಪ್ರಾರಂಭಿಸಿದರು.

ಬಂದಂತಹ ಅತಿಥಿಗಣ್ಯರು ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.  ಸುಮಾರು 100 ಮಂದಿ ಮಹಿಳೆಯರು ಪಾಲ್ಗೊಂಡರು. ಶ್ರೀಮತಿ ಭಾರತಿಯವರು ಧನ್ಯವಾದ ಅರ್ಪಿಸಿ, ರಾಷ್ಟಗೀತೆಯೊಂದಿಗೆ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಯಿತು.