ಮಳೆಗಾಗಿ ಮಂಗಳೂರಿನಲ್ಲಿ ಮುಸ್ಲಿಮರಿಂದ ಪ್ರಾರ್ಥನೆ

ಮಳೆಗಾಗಿ ಮಂಗಳೂರಿನಲ್ಲಿ ಮುಸ್ಲಿಮರಿಂದ ಪ್ರಾರ್ಥನೆ

HSA   ¦    May 15, 2019 11:10:28 AM (IST)
ಮಳೆಗಾಗಿ ಮಂಗಳೂರಿನಲ್ಲಿ ಮುಸ್ಲಿಮರಿಂದ ಪ್ರಾರ್ಥನೆ

ಮಂಗಳೂರು: ದಕ್ಷಿಣ ಕನ್ನಡದ ಬರಗಾಲದ ಛಾಯೆ ಆವರಿಸಿದ್ದು, ದಿನದಿಂದ ದಿನಕ್ಕೆ ನೀರಿಗಾಗಿ ಹಾಹಾಕಾರವು ಹೆಚ್ಚಾಗುತ್ತಲೇ ಇದೆ. ಹೀಗಾಗಿ ರಂಜಾನ್ ಮಾಸದಲ್ಲಿ ಮುಸ್ಲಿಮರು ಬುಧವಾರ ಮಳೆಗಾಗಿ ಸಾಮೂಹಿಕ ಪ್ರಾರ್ಥನೆ ಮಾಡಿದರು.

ನೆಹರೂ ಮೈದಾನದಲ್ಲಿ ಬುಧವಾರ ಬೆಳಗ್ಗೆ 7 ಗಂಟೆಗೆ ಮುಸ್ಲಿಮರು ಶೇಖ್ ಸಕೀಬ್ ಸಲೀಂ ಉಮ್ರಿ ಅವರ ನೇತೃತ್ವದಲ್ಲಿ ಪ್ರಾರ್ಥನೆ ಮಾಡಿದರು.

ರಂಜಾನ್ ಮಾಸದಲ್ಲಿ ಪ್ರಾರ್ಥನೆ ಸಲ್ಲಿಸಿದರೆ ಈಡೇರುತ್ತದೆ ಎಂದು ಎಲ್ಲರು ಒಟ್ಟಿಗೆ ಸೇರಿ ಪ್ರಾರ್ಥನೆ ಸಲ್ಲಿಸಿರುವರು.

ಅಲ್ಲಾಹು ಮನಸ್ಸು ಮಾಡಿದರೆ ಮಳೆ ಬರುವುದು. ಮಳೆ ಬಂದರೂ ಕಷ್ಟ ಬರದೇ ಇದ್ದರೂ ಕಷ್ಟ. ಶುದ್ಧ ಮನಸ್ಸಿನಿಂದ ಪವಿತ್ರ ರಂಜಾನ್ ಮಾಸದಲ್ಲಿ ಅಲ್ಲಾಹ ಮೊರೆ ಹೋಗಿದ್ದೇವೆ ಎಂದು ಶೇಖ್ ಸಕಿಬ್ ಸಲೀಂ ಉಮ್ರಿ ತಿಳಿಸಿದರು.

ಮುಸ್ಲಿಂ ಮಹಿಳೆಯರು ಕೂಡ ಪ್ರಾರ್ಥನೆಯಲ್ಲಿ ಪಾಲ್ಗೊಂಡರು. ಶಾಸಕ ವೇದವ್ಯಾಸ್ ಕಾಮತ್ ಕೂಡ ಉಪಸ್ಥಿತರಿದ್ದರು.