ಪ್ರತಿಮೆ ನಿರ್ಮಾಣಕ್ಕೆ ಅಡ್ಡಿ: ಕಲ್ಲಡ್ಕರ ವಿರುದ್ಧ ಖಾದರ್ ಆಕ್ರೋಶ

ಪ್ರತಿಮೆ ನಿರ್ಮಾಣಕ್ಕೆ ಅಡ್ಡಿ: ಕಲ್ಲಡ್ಕರ ವಿರುದ್ಧ ಖಾದರ್ ಆಕ್ರೋಶ

YK   ¦    Jan 14, 2020 08:53:44 AM (IST)
ಪ್ರತಿಮೆ ನಿರ್ಮಾಣಕ್ಕೆ ಅಡ್ಡಿ: ಕಲ್ಲಡ್ಕರ ವಿರುದ್ಧ ಖಾದರ್ ಆಕ್ರೋಶ

ಮಂಗಳೂರು: ದೇವರ ಪ್ರತಿಮೆ ನಿರ್ಮಿಸಲು ಅಡ್ಡಿ ಮಾಡುವ ಮೂಲಕ ಆರ್ ಎಸ್ ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಅವರು ಸಣ್ಣತನವನ್ನು ಪ್ರದರ್ಶಿಸಿದ್ದಾರೆ. ಇದರಿಂದ ಅವರ ಮನಃಸ್ಥಿತಿ ಏನೆಂಬುದು ಅರ್ಥವಾಗುತ್ತದೆ ಎಂದು ಮಾಜಿ ಸಚಿವ ಯು.ಟಿ.ಖಾದರ್ ಹೇಳಿದರು.

ಕಪಾಲ ಬೆಟ್ಟದಲ್ಲಿ ಏಸು ಪ್ರತಿಮೆ ನಿರ್ಮಾಣ ವಿರೋಧಿಸಿ ಕಲ್ಲಡ್ಕ ಪ್ರಭಾಕರ್ ಭಟ್ ಅವರು ಇಂಧು ಪ್ರತಿಭಟನೆ ನಡೆಸಿದ್ದರು.

ಈ ಸಂಬಂಧ ಪ್ರತಿಕ್ರಿಯಿಸಿದ ಯು.ಟಿ.ಖಾದರ್, ಪ್ರಭಾಕರ್ ಭಟ್ ಅವರು ದಕ್ಷಿಣ ಕನ್ನಡ ಜಿಲ್ಲೆಯ ನೆಮ್ಮದಿ ಹಾಳು ಮಾಡಿದ್ದಾಯಿತು, ಇದೀಗ ಸೋದರತೆ ಹಾಳು ಮಾಡಲು ಹೋಗಿದ್ದಾರೆ ಎಂದು ಗುಡುಗಿದರು.