ಲಾಕ್ ಡೌನ್ ನಡುವೆಯೂ ಕೋಳಿ ಅಂಕ ನಡೆಸಿದ ಐವರ ಬಂಧನ

ಲಾಕ್ ಡೌನ್ ನಡುವೆಯೂ ಕೋಳಿ ಅಂಕ ನಡೆಸಿದ ಐವರ ಬಂಧನ

Ms   ¦    May 03, 2021 04:02:23 PM (IST)
ಲಾಕ್ ಡೌನ್ ನಡುವೆಯೂ ಕೋಳಿ ಅಂಕ ನಡೆಸಿದ ಐವರ ಬಂಧನ

ಪುತ್ತೂರು : ಅಕ್ರಮವಾಗಿ ಕೋಳಿ ಅಂಕ ನಡೆಸುತ್ತಿದ್ದ ವೇಳೆ ಪೊಲೀಸರು ದಾಳಿ ನಡೆಸಿ ಐವರು ಆರೋಪಿಗಳನ್ನು ಬಂಧಿಸಿದ ಘಟನೆ ಪುತ್ತೂರಿನ ಬಲ್ನಾಡಿನಲ್ಲಿ ನಡೆದಿದೆ.

 

ಲಾಕ್ ಡೌನ್ ಜಾರಿಯಲ್ಲಿದ್ದ ಸಂದರ್ಭ ಇದಾಗಿದ್ದರೂ ಅಕ್ರಮವಾಗಿ ಕೋಳಿಅಂಕ ನಡೆಸುತ್ತಿರುವ ವಿಚಾರ ತಿಳಿದ ಪೊಲೀಸರು ಸ್ಥಳಕ್ಕೆ ತಕ್ಷಣ ದಾಳಿ ನಡೆಸಿದ ಕಾರಣದಿಂದಾಗಿ ಕೋಳಿಗಳ ಸಹಿತ ನಗದನ್ನು ಹಾಗೂ ಐವರು ಆರೋಪಿಗಳನ್ನು ಬಂಧಿಸಿದ್ದಾರೆ.  

 

 ನಿಷೇಧಾಜ್ಞೆಯ ನಡುವೆ ಬಲ್ನಾಡಿನ ಸರ್ಕಾರಿ ಜಾಗದಲ್ಲಿ ನಿನ್ನೆ ರಾತ್ರಿ ಕೋಳಿ ಅಂಕ ಆಯೋಜಿಸಲಾಗಿತ್ತು . ಈ ಬಗ್ಗೆ ಮಾಹಿತಿ ಪಡೆದ ಗ್ರಾಮಾಂತರ ಠಾಣೆಯ ಪೊಲೀಸರು ದಾಳಿ ನಡೆಸಿದ್ದಾರೆ . ಬಲ್ನಾಡು ನಿವಾಸಿಗಳಾದ ಲಿಂಗಪ್ಪ ಮೂಲ್ಯ , ಸಂಜೀವ , ನಾರಾಯಣ ನಾಯ್ಕ , ಚಂದ್ರ ಶೇಖರ ಗೌಡ , ಸುಮಂತ್ ಎಂಬವರನ್ನು ಬಂಧಿಸಿದ್ದಾರೆ .

 

ಬಂಧಿತರಿಂದ ಅಂಕಕ್ಕೆ ಬಳಸಲಾಗುತ್ತಿದ್ದ ಏಳು ಹುಂಜಗಳು ಹಾಗೂ ರೂ . 7,820 ನಗದು ವಶಕ್ಕೆ ಪಡೆದಿದ್ದಾರೆ . ಕಾರ್ಯಾಚರಣೆ ವೇಳೆಗೆ ಇತರ ಆರೋಪಿಗಳು ಪರಾರಿಯಾಗಿದ್ದಾರೆ . ಗ್ರಾಮಾಂತರ ಎಣ್ನೆ ಉದಯರವಿ ನೇತೃತ್ವದಲ್ಲಿ ಪ್ರೊಬೇಷನರಿ ಎಸ್ಕೆ ಶ್ರೀಕಾಂತ್ ರಾಥೋಡ್ ಮತ್ತು ಪೊಲೀಸ್ ತಂಡ ಈ ಕಾರ್ಯಾಚರಣೆ ನಡೆಸಿದೆ ಎಂದು ವರದಿಗಳು ತಿಳಿಸಿವೆ.