ದಕ್ಷಿಣ ಕನ್ನಡದಲ್ಲಿ ಮಳೆಗಾಗಿ ದೇವರ ಮೊರೆ

ದಕ್ಷಿಣ ಕನ್ನಡದಲ್ಲಿ ಮಳೆಗಾಗಿ ದೇವರ ಮೊರೆ

HSA   ¦    May 14, 2019 05:52:28 PM (IST)
ದಕ್ಷಿಣ ಕನ್ನಡದಲ್ಲಿ ಮಳೆಗಾಗಿ ದೇವರ ಮೊರೆ

ಮಂಗಳೂರು: ಈ ವರ್ಷ ಕರ್ನಾಟಕದ ಇತರ ಭಾಗಗಳಂತೆ ದಕ್ಷಿಣ ಕನ್ನಡ ಜಿಲ್ಲೆಗೆ ಕೂಡ ತೀವ್ರ ನೀರಿನ ಅಭಾವ ಸೃಷ್ಟಿಯಾಗಿದ್ದು, ಜನರು ನೀರಿಗಾಗಿ ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ.

ಮಂಗಳೂರು ನಗರಕ್ಕೆ ನೀರು ಪೂರೈಕೆ ಮಾಡುವಂತಹ ತುಂಬೆ ಅಣೆಕಟ್ಟಿನಲ್ಲಿ ದಿನೇ ದಿನೇ ನೀರನ ಮಟ್ಟವು ಕಡಿಮೆ ಆಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಕೂಡ ಆತಂಕಕ್ಕೀಡಾಗಿದೆ.

ನಗರದಲ್ಲಿ ನೀರು ಪೂರೈಕೆ ಮೂರು ದಿನಕ್ಕೊಮ್ಮೆ ನಡೆಯುತ್ತಿದೆ. ನೀರಿನ ಸಮಸ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ರೇಷನಿಂಗ್ ಕೂಡ ಮಾಡಲಾಗುತ್ತಿದೆ.

ಮೇ 16 ರಿಂದ 20ರ ತನಕ ನೀರು ಪೂರೈಕೆ ಆಗಲಿದೆ. ಇದರ ಬಳಿಕ ಮೇ 20ರಿಂದ 24ರ ತನಕ ನೀರು ಸ್ಥಗಿತಗೊಳಿಸಲು ಮಹಾನಗರ ಪಾಲಿಕೆ ನಿರ್ಧಾರ ಮಾಡಿದೆ.

ಮಳೆಗಾಗಿ ಶ್ರೀ ಕ್ಷೇತ್ರ ಕದ್ರಿಯಲ್ಲಿ ಸೀಯಾಳಾಭಿಷೇಕ ನಡೆಯಿತು. ಶೀಘ್ರ ಮಳೆಗಾಗಿ ಕಲ್ಕೂರ ಪ್ರತಿಷ್ಠಾನ, ಸ್ಥಳೀಯರು ಸಾಮೂಹಿಕ ಪ್ರಾರ್ಥನೆ ಮಾಡಿದರು.