ಅನಾರೋಗ್ಯ ಹಿನ್ನೆಲೆ: ಪೆಟ್ರೋಲ್ ಸುರಿದು ಅಣ್ಣ-ತಂಗಿ ಆತ್ಮಹತ್ಯೆ

ಅನಾರೋಗ್ಯ ಹಿನ್ನೆಲೆ: ಪೆಟ್ರೋಲ್ ಸುರಿದು ಅಣ್ಣ-ತಂಗಿ ಆತ್ಮಹತ್ಯೆ

YK   ¦    Jun 16, 2020 10:51:03 AM (IST)
ಅನಾರೋಗ್ಯ ಹಿನ್ನೆಲೆ: ಪೆಟ್ರೋಲ್ ಸುರಿದು ಅಣ್ಣ-ತಂಗಿ ಆತ್ಮಹತ್ಯೆ

ಪುಂಜಾಲಕಟ್ಟೆ: ಅನಾರೋಗ್ಯ ದಿಂದ ಬಳಲುತ್ತಿದ್ದು ಅವಿವಾಹಿತ ಅಣ್ಣ- ತಂಗಿ ಇಬ್ಬರು ಮನನೊಂದು ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆ ಗೈದ ಘಟನೆ ಬಂಟ್ವಾಳ ತಾಲೂಕಿನ ಸಂಗಬೆಟ್ಟುವಿನಲ್ಲಿ ಸಂಭವಿಸಿದೆ.


ನೀಲಯ್ಯ ಶೆಟ್ಟಿಗಾರ್ (42) , ಕೇಸರಿ ( 39) ಮೃತಪಟ್ಟ ದುರ್ದೈವಿಗಳು.


ಮನೆಯಲ್ಲಿ ನೀಲಯ್ಯ ಅವರ ಸಹೋದರ ಮತ್ತು ಅವರ ಪತ್ನಿ, ಮಗ ವಾಸವಿದ್ದು, ಮತ್ತೊಂದು ಕೊಠಡಿಯಲ್ಲಿ ಮಲಗಿದ್ದರು. ರಾತ್ರಿ ಸುಮಾರು 11 ಗಂಟೆಯ ಬಳಿಕ ತಮ್ಮ ಕೊಠಡಿಯಲ್ಲಿ ಕೃತ್ಯ ಗೈದಿದ್ದಾರೆ. ನರಳಾಟದ ಶಬ್ದ ಕೇಳಿ ಅಣ್ಣ ಅತ್ತಿಗೆ ಎಚ್ಚರವಾಗಿ ಬಳಿಕ ಸ್ಥಳೀಯರು ಸೇರಿ ಗಂಭೀರ ಗಾಯಗೊಂಡ ಇಬ್ಬರನ್ನೂ ಬಂಟ್ವಾಳ ಸರಕಾರಿ ಆಸ್ಪತ್ರೆ ಗೆ ಸಾಗಿಸಿದರಾದರೂ ಅದಾಗಲೇ ಇಬ್ಬರೂ ಮೃತಪಟ್ಟಿದ್ದರು.


ಮಾಹಿತಿ ತಿಳಿದ ಬಂಟ್ವಾಳ ಗ್ರಾಮಾಂತರ ಎಸ್.ಐ. ಪ್ರಸನ್ನ ಮತ್ತು ಸಿಬಂದಿ ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ.