ಆಸ್ಪತ್ರೆ ಕಟ್ಟಡದಿಂದ ಜಿಗಿದ ಕೋವಿಡ್ ಸೋಂಕಿತ

ಆಸ್ಪತ್ರೆ ಕಟ್ಟಡದಿಂದ ಜಿಗಿದ ಕೋವಿಡ್ ಸೋಂಕಿತ

Jayashree Aryapu   ¦    May 03, 2021 05:30:18 PM (IST)
ಆಸ್ಪತ್ರೆ ಕಟ್ಟಡದಿಂದ ಜಿಗಿದ ಕೋವಿಡ್ ಸೋಂಕಿತ

ಮಂಗಳೂರು: ಕೋವಿಡ್- 19 ಸೋಂಕಿತನೋರ್ವ ಆಸ್ಪತ್ರೆ ಕಟ್ಟಡದಿಂದ ಕೆಳಕ್ಕೆ ಹಾರಿದ ಘಟನೆ ಮಂಗಳೂರಿನ ವೆನ್ಲ್ಯಾಕ್ ಆಸ್ಪತ್ರೆಯಲ್ಲಿ ಸೋಮವಾರ ನಡೆದಿದೆ.

30 ವರ್ಷ ಪ್ರಾಯದ ಕೋವಿಡ್ ಸೋಂಕಿತ ವೆನ್ಲ್ಯಾಕ್ ಆಸ್ಪತ್ರೆಯ ಎರಡನೇ ಮಹಡಿಯಿಂದ ಕೆಳಕ್ಕೆ ಜಿಗಿದಿದ್ದಾನೆ. ಸೋಂಕಿತ ಸಣ್ಣ ಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾನೆ ಎಂದು ಪ್ರಾಥಮಿಕ ವರದಿಯಿಂದ ತಿಳಿದುಬಂದಿದೆ.

ಸೋಂಕಿತ ವ್ಯಕ್ತಿಯು ಮಾನಸಿಕ ಸಮಸ್ಯೆಗಳಿಂದ ಬಳಲುತ್ತಿದ್ದ ಎನ್ನಲಾಗಿದೆ.