ತಜ್ಞರ ಸಲಹೆ ಪಡೆದು ಕುಸಿದ ಕಾರಿಂಜ ತಡೆಗೋಡೆ ಪುನರ್‌ನಿರ್ಮಾಣ: ಶಾಸಕ ರಾಜೇಶ್ ನಾಯ್ಕ್

ತಜ್ಞರ ಸಲಹೆ ಪಡೆದು ಕುಸಿದ ಕಾರಿಂಜ ತಡೆಗೋಡೆ ಪುನರ್‌ನಿರ್ಮಾಣ: ಶಾಸಕ ರಾಜೇಶ್ ನಾಯ್ಕ್

MV   ¦    Oct 16, 2020 08:37:15 PM (IST)
ತಜ್ಞರ ಸಲಹೆ ಪಡೆದು ಕುಸಿದ ಕಾರಿಂಜ ತಡೆಗೋಡೆ ಪುನರ್‌ನಿರ್ಮಾಣ: ಶಾಸಕ ರಾಜೇಶ್ ನಾಯ್ಕ್

ಬಂಟ್ವಾಳ: ಕಳೆದ ಎರಡು ದಿನಗಳ ಹಿಂದೆ ಕುಸಿದು ಬಿದ್ದಿರುವ ಶ್ರೀ ಕಾರಿಂಜೇಶ್ವರ ದೇವಸ್ಥಾನದ ತಡೆಗೋಡೆಯ ಪುನರ್ ನಿರ್ಮಾಣ  ಕಾಮಗಾರಿಯನ್ನು  ತಜ್ಞರ  ಮಾರ್ಗದರ್ಶನ ಪಡೆದು ಶೀಘ್ರ ಕೈಗೊಳ್ಳಲಾಗುವುದು ಎಂದು ಬಂಟ್ವಾಳ ಶಾಸಕ ರಾಜೇಶ್ ನಾಕ್ ಉಳಿಪಾಡಿಗುತ್ತು ಅವರು ಹೇಳಿದರು.

ಅವರು ಶುಕ್ರವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಪತ್ರಕರ್ತರ ಜೊತೆ ಮಾತನಾಡಿದರು.

ತನ್ನ ಶಿಫಾರಸ್ಸಿನಂತೆ ತಾಲೂಕಿನಲ್ಲಿ ಕಾರಿಂಜ ದೇವಸ್ಥಾನ ಸಹಿತ ಈಗಾಲೇ ನಾಲ್ಕು ಕ್ಷೇತ್ರಗಳನ್ನು ಪ್ರವಾಸಿ ತಾಣಗಳಾಗಿ ಗುರುತಿಸಲಾಗಿದ್ದು, ಕಾರಿಂಜ ಕ್ಷೇತ್ರ ಮತ್ತಷ್ಟು ಅಭಿವೃದ್ಧಿಗೊಳ್ಳಲಿದೆ ಎಂದು ಹೇಳಿದರು.

ಇದೇ ವೇಳೆ ಸರಕಾರಿ ಜಮೀನಿನಲ್ಲಿ  ನಡೆಯುತ್ತಿರುವ  ಅಕ್ರ‌ಮ ಗಣಿಗಾರಿಕೆಯಿಂದ ದೇವಸ್ಥಾನದ ತಡೆಗೋಡೆಗೆ ಹಾನಿಯುಂಟಾಗಿದೆ ಎಂದು ಸ್ಥಳೀಯರು ಶಾಸಕರಲ್ಲಿ ದೂರಿಕೊಂಡರು. ಈ ಕುರಿತು ಪ್ರತಿಕ್ರಿಯಿಸಿದ ಶಾಸಕರು,  ಕಂದಾಯ ಇಲಾಖೆ ಹಾಗೂ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮುಂದಿನ ಹದಿನೈದು ದಿನಗಳ ಒಳಗಾಗಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು.  ಯಾವುದೇ ಅಕ್ರಮಗಳಿಗೆ ಅವಕಾಶ ಕೊಡುವುದಿಲ್ಲ ಎಂದವರು ಭರವಸೆ ನೀಡಿದರು.