ಅಪ್ರಾಪ್ತ ಯುವತಿ ಜತೆ ಮದುವೆ: ದೂರು ದಾಖಲು

ಅಪ್ರಾಪ್ತ ಯುವತಿ ಜತೆ ಮದುವೆ: ದೂರು ದಾಖಲು

DA   ¦    Jun 30, 2020 07:57:21 AM (IST)
ಅಪ್ರಾಪ್ತ ಯುವತಿ ಜತೆ ಮದುವೆ: ದೂರು ದಾಖಲು

ಬೆಳ್ತಂಗಡಿ: ಅಪ್ರಾಪ್ತ ಯುವತಿಯೋರ್ವಳು ಮದುವೆಯಾದ ಘಟನೆ ಸೋಮವಾರ ನಡೆದಿದ್ದು ಯುವಕನ ಮೇಲೆ ಫೋಕ್ಸೋ ದಾಖಲಾಗಿದೆ. ಬಾಲಕಿಯು ಮನೆಯಿಂದ ಅಜ್ಜನ ಮನೆಗೆ ಹೋಗುವುದಾಗಿ ಹೇಳಿ ನಾಪತ್ತೆಯಾಗಿದ್ದಳು.

ಬಳಿಕ ಆಕೆ ಯುವಕನೊಂದಿಗೆ ದೇವಸ್ಥಾನದಲ್ಲಿ ವಿವಾಹವಾಗಿರುವುದು ತಿಳಿದು ಬಂತು. ಬಾಲಕಿಯ ಪೋಷಕರ ದೂರಿನ ಮೇರೆಗೆ ಧರ್ಮಸ್ಥಳ ಠಾಣೆಯ ಪೊಲೀಸರು ಕಾಣೆಯಾಗಿರುವ ಕುರಿತು ತನಿಖೆ ನಡೆಸಿದ್ದರು.

ತನಿಖೆ ವೇಳೆ ಬಾಲಕಿಯನ್ನು ತಾಲೂಕಿನ ಲಾಯಿಲ ಗ್ರಾಮದ ಮುದ್ರಾಜೆಯ ಕಿರಣ್ ಎಂಬಾತ ಅಪಹರಿಸಿ ಬೆಳ್ತಂಗಡಿಯ ನಾಗವರ್ಮ ಮೆಲಂತಬೆಟ್ಟು ದೇವಾಸ್ಥಾನದಲ್ಲಿ ಅನಧಿಕೃತವಾಗಿ ಮದುವೆಯಾಗಿರುವುದಾಗಿ ತಿಳಿದುಬಂದಿದೆ. ಅಪ್ರಾಪ್ತೆಯನ್ನು ವಿವಾಹವಾದ ಹಿನ್ನಲೆಯಲ್ಲಿ ಕಿರಣ್ ವಿರುದ್ಧ ಪೋಕ್ಸೋ ಹಾಗೂ ಬಾಲವಿವಾಹ ಕಾಯ್ದೆಯಂತೆ ಪ್ರಕರಣ ದಾಖಲಾಗಿದೆ.