ಮುಳುಗುತ್ತಿದ್ದ ಮೀನುಗಾರಿಕಾ ಬೋಟ್ ನಿಂದ 15 ಮಂದಿ ಮೀನುಗಾರರ ರಕ್ಷಣೆ

ಮುಳುಗುತ್ತಿದ್ದ ಮೀನುಗಾರಿಕಾ ಬೋಟ್ ನಿಂದ 15 ಮಂದಿ ಮೀನುಗಾರರ ರಕ್ಷಣೆ

MS   ¦    Feb 20, 2021 04:15:05 PM (IST)
ಮುಳುಗುತ್ತಿದ್ದ ಮೀನುಗಾರಿಕಾ  ಬೋಟ್ ನಿಂದ 15 ಮಂದಿ ಮೀನುಗಾರರ ರಕ್ಷಣೆ

ಉತ್ತರಕನ್ನಡ: ಆಳ ಸಮುದ್ರದ ಮೀನುಗಾರಿಕೆಗೆ ತೆರಳಿದ್ದ ಕುಮಟಾ ತಾಲೂಕಿನ ಮಿರ್ಜಾನ್ ಗ್ರಾಮದ ವೆಂಕಟರಮಣ ಅಂಬಿಗ ಎನ್ನುವವರ ದುರ್ಗಾ ಭೈರವಿ ಎನ್ನುವ ಬೋಟು ಮುಳುಗಡೆಯಾಗಿದೆ. ಅಲ್ಲಿಗೆ ತೆರಳಿದ್ದ ಮೀನುಗಾರಿಕಾ ಬೊಟೊಂದು ಕಡಲಿನಲ್ಲಿ ಮುಳುಗಡೆಯಾಗಿದ್ದ ಮೀನುಗಾರರನ್ನು ರಕ್ಷಿಸಲಾಗಿದೆ.

ಕುಮಟಾ ತಾಲೂಕಿನ ಗೋಕರ್ಣ ತದಡಿ ಬಂದರಿನಿಂದ 15 ಮಂದಿ ಮೀನುಗಾರರು ಎರಡು ದಿನದ ಹಿಂದೆ ಈ ಬೋಟಿನಲ್ಲಿ ಆಳ ಸಮುದ್ರದ ಮೀನುಗಾರಿಕೆಗೆ ತೆರಳಿದ್ದು, ಸಮುದ್ರದ ನಡುವೆ ಲಂಗರು ಹಾಕಿ ಬೋಟನ್ನು ನಿಲ್ಲಿಸಿದ್ದರು. ಮೀನುಗಾರರೆಲ್ಲ ಮಲಗಿದ್ದ ವೇಳೆ ಏಕಾಏಕಿ ಬೋಟಿನಲ್ಲಿ ನೀರು ತುಂಬಿದೆ.

ನಂತರ ರಕ್ಷಣೆಗೆ ಕೂಗಿಕೊಂಡಾಗ ಸಮೀಪದಲ್ಲೇ ಇದ್ದ ಸರ್ವಲಕ್ಷ್ಮಿ ಎಂಬ ಇನ್ನೊಂದು ಬೋಟಿನವರು ಮುಳುಗುತ್ತಿದ್ದವರನ್ನು ತಮ್ಮ ಬೋಟಿಗೆ ಹತ್ತಿಸಿಕೊಂಡು ತದಡಿ ದಡಕ್ಕೆ ಸುರಕ್ಷೀತವಾಗಿ ಕರೆ ತರುವ ಮೂಲಕ ಸಂಭವಿಸಬಹುದಾದ ಅನಾಹುತವನ್ನು ತಪ್ಪಿಸಿದ್ದಾರೆ.