ಅಪ್ರಾಪ್ತರಿಗೆ ಲೈಂಗಿಕ ಕಿರುಕುಳ ; ಕಾಮುಕ ಯತೀಂಖಾನಾ (52) ಉಸ್ತಾದ್ ಆಯೂಬ್ ಬಂಧನ

ಅಪ್ರಾಪ್ತರಿಗೆ ಲೈಂಗಿಕ ಕಿರುಕುಳ ; ಕಾಮುಕ ಯತೀಂಖಾನಾ (52) ಉಸ್ತಾದ್ ಆಯೂಬ್ ಬಂಧನ

Apr 07, 2021 11:32:02 AM (IST)
   ಅಪ್ರಾಪ್ತರಿಗೆ ಲೈಂಗಿಕ ಕಿರುಕುಳ ;  ಕಾಮುಕ ಯತೀಂಖಾನಾ (52) ಉಸ್ತಾದ್ ಆಯೂಬ್ ಬಂಧನ

ಮಂಗಳೂರು: ಇಲ್ಲಿಗೆ ಸಮೀಪದ ಕುಂಪಲದಲ್ಲಿನ ಯತೀಂಖಾನಾ (ಅನಾಥಾಶ್ರಮ)ದಲ್ಲಿ ವಾರ್ಡನ್‌ ಆಗಿ ಕೆಲಸ ನಿರ್ವಹಿಸುತ್ತಿದ್ದ ಉಸ್ತಾದ್ ಆಯುಬ್ (೫೨) ನನ್ನು ಅಪ್ರಾಪ್ತ ಮಕ್ಕಳಿಗೆ ಲೈಂಗಿಕ ಹಾಗೂ ದೈಹಿಕ ಕಿರುಕುಳ ನೀಡಿದ ಹಿನ್ನೆಲೆಯಲ್ಲಿ ಪೋಕ್ಸೋ ಕಾಯ್ದೆಯಡಿ ಬಂಧಿಸಲಾಗಿದೆ.ಪೊಲೀಸ್ ಇಲಾಖೆ, ಕೆ.ಎಸ್. ಹೆಗ್ಡೆ ಮಕ್ಕಳ ಕಲ್ಯಾಣ ಸಮಿತಿ, ಮಕ್ಕಳ ಕಲ್ಯಾಣ ಅಧಿಕಾರಿಗಳು ಮಂಗಳೂರು ನಗರ ಪೊಲೀಸ್ ಆಯುಕ್ತ ವ್ಯಾಪ್ತಿಯ ಮಕ್ಕಳ ಆರೈಕೆ ಕೇಂದ್ರ, ಅನಾಥಾಶ್ರಮಗಳ 480 ಮಕ್ಕಳಿಗೆ ಜಾಗೃತಿ ಕಾರ್ಯಕ್ರಮ ನಡೆಸಲಾಗಿತ್ತು. ಈ ಕಾರ್ಯಕ್ರಮವು ಗುಡ್‌ ಟಚ್‌ ಆಂಡ್‌ ಬ್ಯಾಡ್‌ ಟಚ್‌ ಬಗ್ಗೆ ಅರಿವು ಮೂಡಿಸಲು, ಮಕ್ಕಳ ಹಕ್ಕುಗಳ ಬಗ್ಗೆ ತಿಳಿಸಲು, ಮಗುವನ್ನು ಯಾವುದಾದರೂ ರೀತಿಯಲ್ಲಿ ದುರುಪಯೋಗಕ್ಕೆ ಒಳಪಡಿಸಲಾಗಿದೆಯೇ ಎಂದು ತಿಳಿಯಲು ಹಾಗೂ ಮಗುವಿನ ಜೊತೆ ಸಮಾಲೋಚನೆ ನಡೆಸುವ ಸಲುವಾಗಿ ಏರ್ಪಡಿಸಲಾಗಿತ್ತು.
ಮಾರ್ಚ್ 28 ರಂದು ಅನಾಥಾಶ್ರಮದಲ್ಲಿ ಮಕ್ಕಳ ಆರೈಕೆ ಮಾಡುವವರಿಗೆ ತಿಳಿಸದೆ ನಡೆಸಿದ ಕಾರ್ಯಕ್ರಮವು ಸಂಪೂರ್ಣವಾಗಿ ಗೌಪ್ಯವಾಗಿತ್ತು. ಆರೈಕೆದಾರರಿಗೆ ಕೊರೊನಾ ಜಾಗೃತಿ ಕಾರ್ಯಕ್ರಮವಾಗಿದೆ ಎಂದು ತಿಳಿಸಲಾಗಿತ್ತು.ಮಕ್ಕಳ ಆರೈಕೆ ಕೇಂದ್ರದಲ್ಲಿ ಮಕ್ಕಳು ಏನನ್ನೂ ಹಂಚಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ ಎಂಬ ಕಾರಣಕ್ಕೆ ಟಿಎಂಎ ಪೈ ಹಾಲ್‌ನಲ್ಲಿ ಕಾರ್ಯಕ್ರಮ ನಡೆಸಲಾಯಿತು ಎಂದು ಪೊಲೀಸ್ ಆಯುಕ್ತ ಶಶಿಕುಮಾರ್‌ ತಿಳಿಸಿದ್ದಾರೆ.
ಕಾರ್ಯಕ್ರಮದಲ್ಲಿ ನಡೆಸಲಾದ ಸಮಾಲೋಚನೆಯಲ್ಲಿ ಕುಂಪಲದ ನೂರಾನಿ ಯತೀಂ ಖಾನಾ ದಾರುಲ್ ಮಸಕೀನ್ ನ 14 ವರ್ಷದ ಬಾಲಕನ ಮೇಲೆ ದೈಹಿಕ ಹಾಗೂ ಲೈಂಗಿಕ ಕಿರುಕುಳ ನೀಡಲಾಗಿದೆ ಎನ್ನುವ ಸತ್ಯ ಬಹಿರಂಗಗೊಂಡಿದೆ. 2 ಸುತ್ತಿನ ಸಮಾಲೋಚನೆಯ ಬಳಿಕ ವಿಚಾರ ಬೆಳಕಿಗೆ ಬಂದಿದೆ.
ಆರು ಸಂಸ್ಥೆಗಳಲ್ಲಿ ಇಂತಹ 20 ನಿದರ್ಶನಗಳು ಬೆಳಕಿಗೆ ಬಂದಿವೆ ಈ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಆಯಕ್ತ ಎನ್ ಶಶಿಕುಮಾರ್ ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ. ಮಹಿಳಾ ಪೊಲೀಸ್ ಠಾಣೆಯಲ್ಲಿ ಪೊಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

 

More Images