ಕ್ವಾರಂಟೈನಲ್ಲಿದ್ದ ವ್ಯಕ್ತಿ ಆತ್ಮಹತ್ಯೆ

ಕ್ವಾರಂಟೈನಲ್ಲಿದ್ದ ವ್ಯಕ್ತಿ ಆತ್ಮಹತ್ಯೆ

DSK   ¦    May 21, 2020 07:38:07 PM (IST)
ಕ್ವಾರಂಟೈನಲ್ಲಿದ್ದ ವ್ಯಕ್ತಿ ಆತ್ಮಹತ್ಯೆ

ಮೂಡುಬಿದಿರೆ : ಮುಂಬೈಯಿಂದ ಬಂದು 2 ಗಂಟೆಗಳ ಕಾಲ ಕ್ವಾರಂಟೈನ್ ನಲ್ಲಿದ್ದ 55ರ ಹರೆಯದ ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಇಲ್ಲಿನ ಕಡಂದಲೆ ಶಾಲೆಯಲ್ಲಿ ಗುರುವಾರ ಬೆಳಿಗ್ಗೆ ಬೆಳಕಿಗೆ ಬಂದಿದೆ.

ಆತ್ಮಹತ್ಯೆಗೈದವರು ಕಡಂದಲೆ ನಿವಾಸಿಯಾಗಿದ್ದು  ಅಣ್ಣ ತಮ್ಮಂದಿರು 3 ಜನ ಮುಂಬೈಯಲ್ಲಿ ಹೊಟೇಲ್ ನಲ್ಲಿ ಕೆಲಸ ಮಾಡಿಕೊಂಡಿದ್ದರು. ಬುಧವಾರ ರಾತ್ರಿ ಇಬ್ಬರು ಸಹೋದರರ ಜೊತೆಗೆ ಮೂಡುಬಿದಿರೆಗೆ ಅವರು ನಿನ್ನೆ ರಾತ್ರಿ 1 ಗಂಟೆಯಿಂದ ಕಡಂದಲೆ ಶಾಲೆಯಲ್ಲಿ ಕ್ವಾರಂಟೈನ್ ನಲ್ಲಿದ್ದರು.  ಆರ್ಥಿಕ ತೊಂದರೆ, ಕೋವಿಡ್ 19 ಬಗ್ಗೆ ಹೆದರಿದ್ದ ಅವರು ಮುಂದೆ ಜೀವನೋಪಾಯಕ್ಕಾಗಿ ಏನು ಕೆಲಸ ಮಾಡುವುದೆಂದು ಗೊಂದಲದಲ್ಲಿದ್ದು ಈ ಬಗ್ಗೆ ಸಹೋದರರ ಬಳಿ ಹೇಳಿಕೊಂಡಿದ್ದರೆನ್ನಲಾಗಿದೆ.

ನಂತರ ಯಾರ ಗಮನಕ್ಕೂ ಬಾರದಂತೆ ಆತ್ಯಹತ್ಯೆ ಮಾಡಿಕೊಂಡಿದ್ದಾರೆ. ಮೃತರಿಗೆ ಅವರಿಗೆ ಮೂವರು ಮಕ್ಕಳಿದ್ದಾರೆ.

ಮೃತದೇಹವನ್ನು ಕೋವಿಡ್ ಪರೀಕ್ಷೆಗಾಗಿ ಕೊಂಡೊಯ್ಯಲಾಗಿದೆ. ಈ ಶಾಲೆಯಲ್ಲಿ ಕ್ವಾರಂಟೈನ್ನ ನಲ್ಲಿ ಇನ್ನೂ ಹಲವರಿದ್ದು, ಅವರನ್ನು ಬೇರೆ ಕಡೆ ಸ್ಥಳಾಂತರಿಸಲಾಗುವುದು ಎಂದು ವರದಿಯಾಗಿದೆ. ಸ್ಥಳಕ್ಕೆ ಉಪವಿಭಾಗಧಿಕಾರಿ ಮದನ ಮೋಹನ್ ಸಿ ಭೇಟಿ ನೀಡಿದ್ದಾರೆ. ಮೃತರು ಪತ್ನಿ ಮೂವರು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ.

ಪರಿಹಾರ ಘೋಷಣೆ: ಆತ್ಮಹತ್ಯೆಗೆ ಶರಣಾದ ಕಡಂದಲೆ ವ್ಯಕ್ತಿಯ ಕುಟುಂಬಕ್ಕೆ ಮುಖ್ಯಮಂತ್ರಿಯವರ ಪರಿಹಾರ ನಿಧಿಯಿಂದ 3 ಲಕ್ಷ ರೂ ನೆರವಿನ ಘೋಷಣೆಯಾಗಿದೆ ಎಂದು ತಿಳಿದು ಬಂದಿದೆ. ಶಾಸಕ ಉಮಾನಾಥ ಕೋಟ್ಯಾನ್ ಅವರ ಶಿಫಾರಸು ಮತ್ತು ವಿನಂತಿ ಮೇರೆಗೆ ವಿಶೇಷ ಪ್ರಕರಣಗಳ ಅಡಿಯಲ್ಲಿ ಈ ಪರಿಹಾರ ಘೋಷಿಸಲಾಗಿದೆ ಎಂದು ತಿಳಿದು ಬಂದಿದೆ.

ಮೂಡುಬಿದಿರೆ ಮೂಲದ ವ್ಯಕ್ತಿ ಮುಂಬೈನಲ್ಲಿ ಸಾವು

ಮುಂಬೈನಲ್ಲಿ ಸಹೋದರಿಯ ಮನೆಯಲ್ಲಿದ್ದ ಮೂಡುಬಿದಿರೆ ಮೂಲದ ವ್ಯಕ್ತಿಯೋರ್ವರು ಕೋರೋನಾ ಸೋಂಕಿನಿಂದ ಬುಧವಾರ ರಾತ್ರಿ ಮೃತಪಟ್ಟರು ಎನ್ನಲಾಗಿದೆ. ವಿದೇಶದಲ್ಲಿ ಉದ್ಯೋಗದಲ್ಲಿದ್ದು  ಕೆಲಸ ಬಿಟ್ಟು ಪುಣೆಯಲ್ಲಿ ಸಹೋದರನ ಜತೆಗೆ ಉದ್ಯೋಗ ಮಾಡಿಕೊಂಡಿದ್ದ ಅವರು ಕೊರೋನಾ ಲಾಕ್ ಡೌನ್ ಕಾರಣದಿಂದಾಗಿ ಇತ್ತೀಚಿಗೆ ಮುಂಬೈನಲ್ಲಿ ಸಹೋದರಿಯ ಮನೆಯಲ್ಲಿದ್ದರು. ಬುಧವಾರ ರಾತ್ರಿ ಮುಂಬೈನಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ ಅವರು ಮೃತಪಟ್ಟಿದ್ದಾರೆ.