ಯಕ್ಷರಂಗದ ಹಿರಿಯ ಕಲಾವಿದ ಶ್ರೀಧರ ಭಂಡಾರಿ ನಿಧನ

ಯಕ್ಷರಂಗದ ಹಿರಿಯ ಕಲಾವಿದ ಶ್ರೀಧರ ಭಂಡಾರಿ ನಿಧನ

HSA   ¦    Feb 19, 2021 10:02:22 AM (IST)
ಯಕ್ಷರಂಗದ ಹಿರಿಯ ಕಲಾವಿದ ಶ್ರೀಧರ ಭಂಡಾರಿ ನಿಧನ

ಪುತ್ತೂರು: ಯಕ್ಷರಂಗದ ಹಿರಿಯ ಕಲಾವಿದ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಾ. ಶ್ರೀಧರ ಭಂಡಾರಿ(73) ಪುತ್ತೂರು ಅವರು ನಿಧನರಾದರು.

ಧರ್ಮಸ್ಥಳ ಮೇಳದ ಹಿರಿಯ ಕಲಾವಿದರಾಗಿದ್ದ ಅವರು ಶತ ದಿಗಿಣ ವೀರ ಎಂದು ಖ್ಯಾತಿ ಪಡೆದಿದ್ದರು. ಇತ್ತೀಚೆಗೆ ಅವರು ತೀವ್ರವಾಗಿ ಕಾಲುನೋವಿನಿಂದ ಬಳಲುತ್ತಿದ್ದರು.

ಇವು ಕೇವಲ ಕಲಾವಿದರಾಗಿ ಮಾತ್ರವಲ್ಲದೆ, ಸಂಘಟಕರಾಗಿಯೂ ಸುಬ್ರಹ್ಮಣ್ಯ ಮೇಳ ಹಾಗೂ ಪುತ್ತೂರು ಮೇಳಗಳನ್ನು ನಡೆಸಿದ್ದರು. ಇವರು ಹೆಚ್ಚಾಗಿ ಅಭಿಮನ್ಯು, ಬಭ್ರುವಾಹನ, ಕೃಷ್ಣ, ಭಾರ್ಗವ ಪಾತ್ರಗಳನ್ನು ಮಾಡುತ್ತಿದ್ದು, ಇವುಗಳು ಅವರಿಗೆ ಖ್ಯಾತಿ ತಂದುಕೊಟ್ಟಿತ್ತು.

ಶ್ರೀಧರ ಭಂಡಾರಿ ಅವರು ಅಪಾರ ಅಭಿಮಾನಿ ಬಳಗವನ್ನು ಅಗಲಿರುವರು.