ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಮತ್ತೆ ಆರು ಮಂದಿಗೆ ಕೊರೋನಾ

ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಮತ್ತೆ ಆರು ಮಂದಿಗೆ ಕೊರೋನಾ

HSA   ¦    Jun 29, 2020 04:45:11 PM (IST)
ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಮತ್ತೆ ಆರು ಮಂದಿಗೆ ಕೊರೋನಾ

ಮಂಗಳೂರು: ಕೊವಿಡ್-19 ಸೋಂಕು ಉಳ್ಳಾಲ ಠಾಣೆಯನ್ನು ಸಂಪೂರ್ಣವಾಗಿ ಸುತ್ತುವರಿದಿದ್ದು, ಇಂದು ಮತ್ತೆ ಆರು ಮಂದಿಗೆ ಕೊರೋನಾ ಸೋಂಕು ಪಾಸಿಟಿವ್ ಆಗಿದೆ.

ಈ ಮೊದಲು ಠಾಣೆಯಲ್ಲಿ ಆರು ಮಂದಿಗೆ ಕೊರೊನಾ ಇರುವುದು ಪತ್ತೆಯಾಗಿತ್ತು. ಇಂದು ಓರ್ವ ಹೋಂಗಾರ್ಡ್ ಮತ್ತು ಐದು ಮಂದಿ ಪೊಲೀಸರಿಗೆ ಕೊರೋನಾ ಇರುವುದು ಪತ್ತೆಯಾಗಿದೆ.

ಠಾಣೆಯನ್ನು ಈಗ ಭಾಗಶಃ ಸೀಲ್ ಡೌನ್ ಮಾಡಲಾಗಿದೆ. ಉಳ್ಳಾಲ ವ್ಯಾಪ್ತಿಯಲ್ಲಿ ಕೊರೋನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ.