ಭಾರತದ ಮಾಜಿ ಫುಟ್ಬಾಲ್‌ ತಂಡದ ನಾಯಕರಾಗಿದ್ದ ಶೇಖರ್‌ ಬಂಗೇರ ಕೋವಿಡ್‌ ನಿಂದ ಸಾವು

ಭಾರತದ ಮಾಜಿ ಫುಟ್ಬಾಲ್‌ ತಂಡದ ನಾಯಕರಾಗಿದ್ದ ಶೇಖರ್‌ ಬಂಗೇರ ಕೋವಿಡ್‌ ನಿಂದ ಸಾವು

Jun 10, 2021 02:49:02 PM (IST)
ಭಾರತದ ಮಾಜಿ ಫುಟ್ಬಾಲ್‌ ತಂಡದ ನಾಯಕರಾಗಿದ್ದ  ಶೇಖರ್‌ ಬಂಗೇರ ಕೋವಿಡ್‌ ನಿಂದ ಸಾವು

ಉಡುಪಿ : ಭಾರತ ಫುಟ್ಬಾಲ್ ತಂಡದ ಮಾಜಿ ನಾಯಕ ಶೇಖರ್ ಪದ್ದು ಬಂಗೇರ ಅವರು ಕೋವಿಡ್ ಸೋಂಕಿನಿಂದ ನಿಧನರಾಗಿದ್ದಾರೆ. ಕಳೆದ ೧೫ ದಿನಗಳಿಂದ ಕೋವಿಡ್ ಸೋಂಕಿನಿಂದ ಬಳಲುತ್ತಿದ್ದ 74 ವರ್ಷದ ಶೇಖರ್ ಪದ್ದು ಬಂಗೇರ ಅವರು ಬ್ರಹ್ಮಾವರದ ಮಹೇಶ್ ಆಸ್ಪತ್ರೆಯಲ್ಲಿ ಬುಧವಾರ ಕೊನೆಯುಸಿರೆಳೆದಿದ್ದಾರೆ.
ಎಂಬತ್ತರ ದಶಕದಲ್ಲಿ ದೇಶದ ಫುಟ್ಬಾಲ್ ತಂಡವನ್ನು ಮುನ್ನಡೆಸಿದ್ದ ಶೇಖರ್ ಪದ್ದು ಬಂಗೇರ ಅವರು ಮೂಲತಃ ಉಡುಪಿಯ ಬಡಾನಿಡಿಯೂರಿನವರು. ಇವರು ಭಾರತ ತಂಡದ ಗೋಲ್ ಕೀಪರ್ ಹಾಗೂ ಕ್ಯಾಪ್ಟನ್ ಕೂಡ ಆಗಿದ್ದರು. ಬಹುಕಾಲ ಮುಂಬೈಯಲ್ಲೇ ವಾಸವಾಗಿದ್ದ ಅವರು, ಹಲವು ಪ್ರತಿಷ್ಠಿತ ಕ್ಲಬ್ – ಸಂಸ್ಥೆಗಳಲ್ಲಿ ಕೋಚ್ ಆಗಿ ಕೂಡಾ ಸೇವೆ ಸಲ್ಲಿಸಿದ್ದಾರೆ.  ಶೇಖರ್ ಬಹುಕಾಲ ಮುಂಬೈಯಲ್ಲೇ ವಾಸವಾಗಿದ್ದರು. ಹಲವು ಪ್ರತಿಷ್ಠಿತ ಕ್ಲಬ್-ಸಂಸ್ಥೆಗಳಲ್ಲಿ ಕೋಚ್ ಆಗಿ ಸೇವೆ ಸಲ್ಲಿಸಿದ್ದು, ಈಗಲೂ ತರಬೇತುದಾರರಾಗಿ ಕೆಲಸ ಮಾಡುತ್ತಿದ್ದರು.ಮುಂಬೈನಲ್ಲಿ ಇದ್ದಾಗಲೇ ಶೇಖರ್ ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡಿದ್ದರು. ಕೆಲ ತಿಂಗಳ ಹಿಂದೆ ಮುಂಬೈನಿಂದ ಉಡುಪಿಗೆ ಆಗಮಿಸಿದ್ದರು.ಇವರ  ನಿಧನಕ್ತ ನೂರಾರು  ಕ್ರೀಡಾ  ಪ್ರೇಮಿಗಳು ಮತ್ತು ಅಭಿಮಾನಿಗಳು  ಕಂಬನಿ ಮಿಡಿದಿದ್ದಾರೆ. ಇವರ   ಅಂತಿಮ ವಿಧಿವಿಧಾನವು  ಉಡುಪಿಯ ಮದರ್ ಆಫ್ ಸಾರೋಸ್ ಚರ್ಚ್ ನಲ್ಲಿ ಇಂದು ನಡೆಯಿತು. ಈ ಸಂದರ್ಭ ವಿಕ್ಟೋರಿಯಾ ಫುಟ್ಬಾಲ್ ಅಕಾಡೆಮಿ ಟ್ರಸ್ಟಿ ಹಾಗೂ ತರಬೇತುದಾರ ಕ್ಲೈವ್ ನೋಲನ್ ಮಸ್ಕರೇನ್ಹಾಸ್ ಮತ್ತು ಮಿಲಾನಾ ಉಪಸ್ಥಿತರಿದ್ದರು.