ಪಚ್ಚನಾಡಿಯಲ್ಲಿ ಹಕ್ಕಿ ಜ್ವರದ ಭೀತಿ

ಪಚ್ಚನಾಡಿಯಲ್ಲಿ ಹಕ್ಕಿ ಜ್ವರದ ಭೀತಿ

Pavan Kumar   ¦    Jan 11, 2021 02:02:19 PM (IST)
ಪಚ್ಚನಾಡಿಯಲ್ಲಿ ಹಕ್ಕಿ ಜ್ವರದ ಭೀತಿ

ಮಂಗಳೂರು: ದೇಶದ ವಿವಿಧ ರಾಜ್ಯಗಳಲ್ಲಿ ಹಕ್ಕಿ ಜ್ವರದ ಆತಂಕ ಮನೆಮಾಡಿರುವ ಸಂದರ್ಭದಲ್ಲಿ ಮಂಗಳೂರು ಹೊರವಲಯದ ವಾಮಂಜೂರಿನ ಪಚ್ಚನಾಡಿಯ ಡಂಪಿಂಗ್ ಯಾರ್ಡ್ ಸಮೀಪ ಸ್ಮಶಾನಕ್ಕೆ  ಹೋಗುವ ದಾರಿಯಲ್ಲಿ ಮೂರು ಕಾಗೆಗಳು ಇಂದು ಸವನಪ್ಪಿದ್ದು ಜನರು ಆತಂಕಕ್ಕೆ ಒಳಗಾಗಿದ್ದಾರೆ.

ಸ್ಥಳಕ್ಕೆ ಆರೋಗ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದು, ಕಾಗೆಗಳ ದೇಹದ ಮಾದರಿಯನ್ನು ಸಂಗ್ರಹಿಸಿದ್ದಾರೆ.