ದಕ್ಷಿಣ ಕನ್ನಡದಲ್ಲಿ ಒಂದು, ಉಡುಪಿಯಲ್ಲಿ ಆರು ಮಂದಿಗೆ ಕೊರೋನಾ ಸೋಂಕು

ದಕ್ಷಿಣ ಕನ್ನಡದಲ್ಲಿ ಒಂದು, ಉಡುಪಿಯಲ್ಲಿ ಆರು ಮಂದಿಗೆ ಕೊರೋನಾ ಸೋಂಕು

HSA   ¦    May 20, 2020 03:35:01 PM (IST)
ದಕ್ಷಿಣ ಕನ್ನಡದಲ್ಲಿ ಒಂದು, ಉಡುಪಿಯಲ್ಲಿ ಆರು ಮಂದಿಗೆ ಕೊರೋನಾ ಸೋಂಕು

ಮಂಗಳೂರು: ಬುಧವಾರ ಉಡುಪಿಯಲ್ಲಿ ಆರು ಮತ್ತು ದಕ್ಷಿಣ ಕನ್ನಡದಲ್ಲಿ ಒಂದು ಕೊರೋನಾ ಸೋಂಕು ಪ್ರಕರಣವು ದಾಖಲಾಗಿದೆ.

ಮಂಗಳೂರಿನ ನೀರುಮಾರ್ಗಕ್ಕೆ ಬೆಂಗಳೂರಿನಿಂದ ತನ್ನ ಮಗನ ಜತೆಗೆ ಬಂದಿದ್ದ 40ರ ಹರೆಯದ ಮಹಿಳೆಯಲ್ಲಿ ಸೋಂಕು ಕಾಣಿಸಿಕೊಂಡಿದೆ.

ಇವರಿಬ್ಬರು ಕುಡುಪು ಹಾಗೂ ಕುಟ್ಟಿಕಾಲದ ಮನೆಯಲ್ಲಿ ಇದ್ದು, ಮೇ 17ರಂದು ಬಿಪಿ ಹಾಗೂ ಅಸ್ತಮಾ ಹೆಚ್ಚಾದ ಹಿನ್ನೆಲೆಯಲ್ಲಿ ವೆನ್ಲಾಕ್ ಆಸ್ಪತ್ರೆಗೆ ದಾಖಲಾಗಿದ್ದರು. ಹೀಗಾಗಿ ದಕ್ಷಿಣ ಕನ್ನಡದಲ್ಲಿ ಕೊವಿಡ್-19 ಸೋಂಕಿತರ ಸಂಖ್ಯೆಯು 48ಕ್ಕೆ ಏರಿಕೆ ಆಗಿದೆ.

ಉಡುಪಿಯಲ್ಲಿ ಹೊಸ ಆರು ಪ್ರಕರಣಗಳ ಜತೆಗೆ ಒಟ್ಟು ಪ್ರಕರಣವು 21ಕ್ಕೆ ಏರಿಕೆ ಆಗಿದೆ.