ಬೆಳ್ತಂಗಡಿ: ೧೦ನೇ ತರಗತಿ ವಿದ್ಯಾರ್ಥಿ ಕೆರೆಗೆ ಬಿದ್ದು ಸಾವು

ಬೆಳ್ತಂಗಡಿ: ೧೦ನೇ ತರಗತಿ ವಿದ್ಯಾರ್ಥಿ ಕೆರೆಗೆ ಬಿದ್ದು ಸಾವು

DA   ¦    Nov 21, 2020 09:34:10 AM (IST)
ಬೆಳ್ತಂಗಡಿ: ೧೦ನೇ ತರಗತಿ ವಿದ್ಯಾರ್ಥಿ ಕೆರೆಗೆ ಬಿದ್ದು ಸಾವು

ಬೆಳ್ತಂಗಡಿ: ಹತ್ತನೇ ತರಗತಿಯ ವಿದ್ಯಾರ್ಥಿಯೊಬ್ಬ ಆಕಸ್ಮಿಕವಾಗಿ ಕೆರೆಯ ನೀರಿಗೆ ಬಿದ್ದು ಮೃತಪಟ್ಟ ಘಟನೆ ವೇಣೂರು ಠಾಣಾ ವ್ಯಾಪ್ತಿಯಲ್ಲಿ ಶುಕ್ರವಾರ ನಡೆದಿದೆ.

ಆರಂಬೋಡಿ ಗ್ರಾಮದ ಕೋಡ್ಯೇಲು ಮನೆ ನಿವಾಸಿ ನಾರಾಯಣ ಶೆಟ್ಟಿ ಎಂಬುವರ ಪುತ್ರ ಸಮರ್ಥ್ (17) ಎಂಬುವನೇ ಮೃತಪಟ್ಟವನು.


ಸಿದ್ಧಕಟ್ಟೆ ಗುಣಶ್ರೀ ಆಂಗ್ಲ ಮಾಧ್ಯಮ ಶಾಲೆಯ ಹತ್ತನೇ ತರಗತಿಯ ವಿದ್ಯಾರ್ಥಿಯಾಗಿದ್ದ ಈತ ಗುರುವಾರ ಬೆಳಿಗ್ಗೆ ತನ್ನ ಟಿಪ್ಪಣಿ ಪುಸ್ತಕಗಳನ್ನು ಪರಿಶೀಲಿಸಿಕೊಳ್ಳುವುದಕ್ಕಾಗಿ ಶಾಲೆಗೆ ತೆರಳಿದ್ದ.

ಬಳಿಕ ಶಾಲೆಯಿಂದ ಮನೆಗೆ ಮರಳಿ ಬಂದಿರಲಿಲ್ಲಾ. ಸಂಜೆಯವರೆಗೂ ಮನೆಗೆ ಬಾರದ ಹಿನ್ನಲೆಯಲ್ಲಿ ಮನೆಯವರು ಶೋಧಿಸಿದಾಗ ಮನೆಯ ಪಕ್ಕದಲ್ಲಿನ ಕೆರೆಯಲ್ಲಿ ಮೃತ ದೇಹ ಪತ್ತೆಯಾಗಿದೆ. ಬಾಲಕ ಆಕಸ್ಮಿಕವಾಗಿ ಬಿದ್ದಿರಬಹುದು ಎಂದು ಶಂಕಿಸಲಾಗಿದೆ. ವೇಣೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.