ಆಷಾಢ ಮಾಸದ ಪ್ರಥಮೈಕಾದಶಿ: ತಪ್ತ ಮುದ್ರಾಧಾರಣೆ

ಆಷಾಢ ಮಾಸದ ಪ್ರಥಮೈಕಾದಶಿ: ತಪ್ತ ಮುದ್ರಾಧಾರಣೆ

DA   ¦    Jul 12, 2019 07:31:25 PM (IST)
ಆಷಾಢ ಮಾಸದ ಪ್ರಥಮೈಕಾದಶಿ: ತಪ್ತ ಮುದ್ರಾಧಾರಣೆ

ಬೆಳ್ತಂಗಡಿ: ಆಷಾಢ ಮಾಸದ ಏಕಾದಶಿ ಪ್ರಥಮೈಕಾದಶಿಯಾಗಿ ಭಗವಂತ ಯೋಗ ನಿದ್ರೆಗೆ(ಶಯನೀ) ಸರಿಯುವ ಪರ್ವಕಾಲವಾಗಿ ವಿಶೇಷ ಮಹತ್ವ ಪಡೆದಿದೆ ಎಂದು ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಶ್ರೀಗಳ ನುಡಿದರು.

ಉಜಿರೆ ಶ್ರೀ ಜನಾರ್ದನ ದೇವಸ್ಥಾನದಲ್ಲಿ ಆಡಳಿತ ಮೊಕ್ತೇಸರ ವಿಜಯರಾಘವ ಪಡ್ವೆಟ್ನಾಯರ ನೇತೃತ್ವದಲ್ಲಿ ಶುಕ್ರವಾರ ನಡೆದ ಪ್ರಥಮೈಕಾದಶೀ ತಪ್ತ ಮುದ್ರಾಧಾರಣೆಯಲ್ಲಿ 500ಕ್ಕೂ ಹೆಚ್ಚು ಭಕ್ತಾದಿಗಳಿಗೆ ಮುದ್ರಧಾರಣೆ ನೆರವೇರಿಸಿ ಆಶೀರ್ವಚನ ನೀಡಿದರು.

ವೇದಮೂರ್ತಿ ಶ್ರೀಪತಿ ಎಳಚಿತ್ತಾಯರು ಸಂದರ್ಶನ ಹೋಮ ಧಾರ್ಮಿಕ ವಿಧಿ ನೆರವೇರಿಸಿ, ಬೆಳ್ತಂಗಡಿ ತಾಲೂಕು ತುಳು ಶಿವಳ್ಳಿ ಸಭಾಧ್ಯಕ್ಷ ರಾಘವೇಂದ್ರ ಬೈಪಾಡಿತ್ತಯ, ಉಜಿರೆ ವಲಯಾಧ್ಯಕ್ಷ ಶರತ್‍ಕೃಷ್ಣ ಪಡ್ವೆಟ್ನಾಯ ಮತ್ತು ಪರಾರಿ ವೆಂಕಟ್ರಮಣ ಹೆಬ್ಬಾರ್ ಮುದ್ರಾಧಾರಣೆಯ ವ್ಯವಸ್ಥೆ ಕಲ್ಪಿಸಿದರು.

ಆಧ್ಯಾತ್ಮಿಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವವ ದೃಷ್ಟಿಯಿಂದ ಜುಲೈ 26ರಿಂದ ಸೆಪ್ಟಂಬರ್ 13ರವರೆಗೆ ತನ್ನ 23ನೇ ಚಾತುರ್ಮಾಸ್ಯ ವೃತವನ್ನು ಸುಬ್ರಹ್ಮಣ್ಯ ಮೂಲ ಮಠದಲ್ಲಿ ನಡೆಸಲಿರುವುದಾಗಿ ಸ್ವಾಮೀಜಿ ತಿಳಿಸಿದರು.

ದೇಗುಲ ಮಠ ವಿವಾದ
ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಮತ್ತು ಮಠದ ವಿವಾದ ಬಗೆಗೆ ಪ್ರಸ್ತಾವಿಸಿದಾಗ ಶ್ರೀಗಳವರು ಮಠ ಮತ್ತು ದೇವಾಲಯದ ಮಧ್ಯೆ ಯಾವುದೇ ಸಂಘರ್ಷವಿಲ್ಲ. ಭಿನ್ನಾಭಿಪ್ರಾಯಗಳನ್ನು ಸಮಾಧಾನಕರ ವಾತಾವರಣದಲ್ಲಿ ಬಗೆಹರಿಸಲಾಗುವುದು. ಪೇಜಾವರ ಶ್ರೀಗಳವರು ಮೊದಲಸುತ್ತಿನ ಮಾತುಕತೆ, ಚರ್ಚೆ ನಡೆಸಿದ್ದು, ಮುಂದಿನ ಸುತ್ತಿನ ವಿಚಾರ ವಿಮರ್ಶೆಯಲ್ಲಿ ಸೌಹಾರ್ದಯುತ ತೀರ್ಮಾನವಾಗುವ ವಿಶ್ವಾಸವಿದೆ. ಅತೀ ಶೀಘ್ರದಲ್ಲಿ ವಿವಾದ ಬಗೆಹರಿಯುವ ಆಶಾಭಾವವಿದೆ ಎಂದರು.