ಡಿ.26ರಂದು ಸೂರ್ಯಗ್ರಹಣ:ಧರ್ಮಸ್ಥಳದಲ್ಲಿ ವಿಶೇಷ ಸೇವೆ ಇಲ್ಲ

ಡಿ.26ರಂದು ಸೂರ್ಯಗ್ರಹಣ:ಧರ್ಮಸ್ಥಳದಲ್ಲಿ ವಿಶೇಷ ಸೇವೆ ಇಲ್ಲ

DA   ¦    Dec 11, 2019 09:35:47 AM (IST)
ಡಿ.26ರಂದು ಸೂರ್ಯಗ್ರಹಣ:ಧರ್ಮಸ್ಥಳದಲ್ಲಿ ವಿಶೇಷ ಸೇವೆ ಇಲ್ಲ

ಬೆಳ್ತಂಗಡಿ: ಕಂಕಣ ಸೂರ್ಯಗ್ರಹಣ ಪ್ರಯುಕ್ತ ಡಿ.26ರಂದು ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿ ಸನ್ನಿಧಿಯಲ್ಲಿ ಬೆಳಗ್ಗೆ 6.30ರಿಂದ ಮಧ್ಯಾಹ್ನ 12ರವರೆಗೆ ದೇವರ ದರ್ಶನ, ತುಲಾಭಾರ ಹಾಗೂ ಪೂಜಾದಿ ಸೇವೆಗಳು ನೆರವೇರುವುದಿಲ್ಲ.

ಮಧ್ಯಾಹ್ನ 12ಗಂಟೆ ನಂತರ ದೇವರ ದರ್ಶನ ಸಮಯ, ಪೂಜಾದಿ ಸೇವೆಗಳು ಲಭ್ಯವಾಗಲಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ದೇವಸ್ಥಾನದ ಪ್ರಕಟನೆ ತಿಳಿಸಿದೆ.