News Kannada
Saturday, February 24 2024
ಕರ್ನಾಟಕ

ಸಾಲ ತೀರಿಸಲು ಕಿಡ್ನಿ ಮಾರಾಟಕ್ಕೆ ಮುಂದಾದ ದಂಪತಿಗೆ 40 ಲಕ್ಷ ರೂ ನಾಮ ಹಾಕಿದ ಸೈಬರ್ ವಂಚಕ

Photo Credit :

ಹೈದರಾಬಾದ್: ದಂಪತಿಗಳಿಬ್ಬರು ತಮ್ಮ ಸಾಲ ತೀರಿಸಲು ಹಣವಿಲ್ಲದೇ ಕಿಡ್ನಿ ಮಾರಲು ಮುಂದಾಗಿ ಇದೀಗ ₹40 ಲಕ್ಷ ಕಳೆದುಕೊಂಡು ಕಣ್ಣೀರಿಡುವಂತಾಗಿದೆ. ಎಂ. ವೆಂಕಟೇಶ್ ಹಾಗೂ ಪತ್ನಿ ಲಾವಣ್ಯ ಹಣ ಕಳೆದುಕೊಂಡವರು.
ಸ್ಟೇಷನರಿ ಅಂಗಡಿಯೊಂದನ್ನ ಇಟ್ಟುಕೊಂಡಿದ್ದ ಈ ದಂಪತಿ ಬ್ಯುಸಿನೆಸ್ ಹಾಗೂ ಮನೆ ನಿರ್ಮಾಣಕ್ಕಾಗಿ ಸಾಲ ತೆಗೆದುಕೊಂಡಿದ್ದರಂತೆ. ಲಾಕ್​ಡೌನ್​ ಇದ್ದಿದ್ದರಿಂದ ಈ ದಂಪತಿಗೆ ಯಾವುದೇ ಆದಾಯ ಬರುತ್ತಿರಲಿಲ್ಲವಂತೆ.. ಹೀಗಾಗಿ ₹1. 5 ಕೋಟಿ ಸಾಲ ಮಾಡಿ ಮನೆ 4 ಅಂತಸ್ತಿನ ಕಟ್ಟಡ ನಿರ್ಮಿಸಿದ್ದರು. ಈ ಸಾಲ ತೀರಿಸಲು ಬೇರೆ ದಾರಿ ಸಿಗದೇ ದಂಪತಿ ಕಿಡ್ನಿ ಮಾರಲು ಮುಂದಾಗಿದ್ದಾರೆ. ಕಿಡ್ನಿ ಮಾರಾಟಕ್ಕಾಗಿ ಇಂಟರ್ನೆಟ್​​ ಮೊರೆ ಹೋಗಿದ್ದಾರೆ.
ಮಾರ್ಚ್ ತಿಂಗಳಲ್ಲಿ ಈ ದಂಪತಿಗೆ ಇಂಟರ್ನೆಟ್​​ನಲ್ಲಿ ವ್ಯಕ್ತಿಯೋರ್ವನ ನಂಬರ್ ಸಿಕ್ಕಿದೆ. ಆತ ತಾನು ಯುಕೆನಲ್ಲಿ ವೈದ್ಯನಾಗಿ ಸೇವೆ ಸಲ್ಲಿಸುತ್ತಿರೋದಾಗಿ ಹೇಳಿಕೊಂಡಿದ್ದಾನೆ. ಅಲ್ಲದೇ ಕಿಡ್ನಿಗೆ ₹5 ಕೋಟಿ ಕೊಟ್ಟು ಖರೀದಿಸುವುದಾಗಿ ದಂಪತಿಗೆ ನಂಬಿಸಿದ್ದಾನೆ.ಈ ವೇಳೆ ಕಿಡ್ನಿ ಖರೀದಿಸುತ್ತೇನೆ ಎಂದವನು ನೋಂದಾವಣಿ, ನಿರ್ವಹಣಾ ವೆಚ್ಛ, ಕರೆನ್ಸಿ ಎಕ್ಸ್​ಚೇಂಜ್ ಅಂತೆಲ್ಲಾ ಕಥೆ ಕಟ್ಟಿ ದಂಪತಿಯಿಂದ ಮೊದಲಿಗೆ ₹26 ಲಕ್ಷ ಹಣ ಜಮೆ ಮಾಡಿಸಿಕೊಂಡಿದ್ದಾನೆ. ಇದಕ್ಕಾಗಿ ಆತ ಆರ್​ಬಿಐನ ಲೋಗೋ ಇದ್ದ ವೆಬ್​ಪೇಜ್​ ಲಿಂಕ್ ಕಳುಹಿಸಿ ಯಾಮಾರಿಸಿದ್ದಾನೆ. ಅಲ್ಲದೇ ಬೆಂಗಳೂರಿನ ಲಾಡ್ಜ್​ ಒಂದರಲ್ಲಿ ನಿಮ್ಮನ್ನ ಭೇಟಿಯಾಗುತ್ತೇನೆ ಎಂದು ನಂಬಿಸಿದ್ದಾನೆ.
ಕೊನೆಗೆ ಬೆಂಗಳೂರಿನ ಲಾಡ್ಜ್​ ಒಂದರಲ್ಲಿ ದಂಪತಿಯನ್ನ ಭೇಟಿಯಾದ ಆಫ್ರಿಕಾದ ಪ್ರಜೆಯೋರ್ವ ಅವರಿಗೆ ಸೂಟ್​​ಕೇಸ್​​ನಲ್ಲಿ ಕಪ್ಪು ನೋಟುಗಳನ್ನ ತಂದಿರುವುದನ್ನ ತೋರಿಸಿದ್ದಾನೆ. ಈ ಕಪ್ಪು ನೋಟಿಗೆ ಯಾವುದೋ ಕೆಮಿಕಲ್ ಮಿಕ್ಸ್ ಮಾಡಿ ಅದು 2 ಸಾವಿರ ರೂಪಾಯಿಯ ನೋಟಾಗಿ ಪರಿವರ್ತನೆಯಾಗುತ್ತದೆ ಎಂದಿದ್ದಾನೆ. ಇದನ್ನ ನಂಬಿದ ದಂಪತಿಗೆ ಕಪ್ಪು ನೋಟುಗಳನ್ನ ಕೊಟ್ಟು ನಿಮಗೆ ಇದಕ್ಕೆ ಬೇಕಿರೋ ಕೆಮಿಕಲ್ ಕಳಿಸುತ್ತೇನೆಂದು ಹೇಳಿ ಮತ್ತೆ ₹14 ಲಕ್ಷ ಹಣವನ್ನ ದಂಪತಿಯಿಂದ ಟ್ರಾನ್ಸ್​​ಫರ್ ಮಾಡಿಸಿಕೊಂಡಿದ್ದಾನೆ. ಹೀಗೆ ಬರೋಬ್ಬರಿ 40 ಲಕ್ಷ ಹಣ ಕಳೆದುಕೊಂಡು ಮೋಸ ಹೋದ ದಂಪತಿ ಸದ್ಯ ಪೊಲೀಸರಿಗೆ ದೂರು ನೀಡಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು