News Kannada
Thursday, July 07 2022

ಕರ್ನಾಟಕ

ನರಭಕ್ಷಕನಿಗೆ ಅನ್ನದಾತ ಬಲಿ - 1 min read

Photo Credit :

ನರಭಕ್ಷಕನಿಗೆ ಅನ್ನದಾತ ಬಲಿ

ಹುಲ್ಲಹಳ್ಳಿ: ನಂಜನಗೂಡು ತಾಲೂಕಿನ ಸಮೀಪವಿರುವ ಹಾದನೂರು ಗ್ರಾಮದ ಶಿವಣ್ಣ (55) ತಮ್ಮ ಜಮೀನಿನಲ್ಲಿ ಜಾನುವಾರು ಮೇಯಿಸುತ್ತಿರುವ ಸಂದರ್ಭದಲ್ಲಿ ನರಭಕ್ಷಕ ಹುಲಿಯು ದಾಳಿ ಮಾಡಿ ಬಲಿ ತೆಗೆದುಕೊಂಡಿರುವ ಘಟನೆ ನಡೆದಿದೆ.


ತಾಲೂಕಿನ ಹೆಡಿಯಾಲ ಸಮೀಪವಿರುವ ಹಾದನೂರು ಗ್ರಾಮದ ರೈತ ಶಿವಣ್ಣ, ಮಹದೇವಯ್ಯ, ವೆಂಕಟೇಶ್, ಪ್ರಸನ್ನ, ಎಂಬುವರು ಬೆಳಿಗ್ಗೆ  ಜಾನುವಾರುಗಳನ್ನು ಹಾದನೂರು ಗ್ರಾಮದಿಂದ ಸುಮಾರು 2 ಕಿ.ಮೀ ದೂರವಿರುವ ನಂಜದೇವರಬೆಟ್ಟದ ಸಮೀಪವಿರುವ ಕಳ್ಳಂಜಪ್ಪನ ಗುಡಿಯ ಪಕ್ಕದಲ್ಲಿ ಮೇಯಿಸುತ್ತಿರುವಾಗ ಶಿವಣ್ಣ ಎಂಬುವವರು ಒಬ್ಬರೆ ಕಲ್ಲಿನ ಮೇಲೆ ಕುಳಿತಿದ್ದರು ಇನ್ನುಳಿದ ಮೂವರು ಅಕ್ಕಪಕ್ಕದಲ್ಲಿ ಕುಳಿತಿರುವಾಗ ಶಿವಣ್ಣನ ಮೇಲೆರಗಿದ ಹುಲಿ ಕತ್ತಿನ ಭಾಗ ಹಿಡಿದು ಎಳೆದೊಯ್ದಿದೆ. ವಿಷಯ ತಿಳಿದು ಅಕ್ಕಪಕ್ಕದ ಜಮೀನಿನ ರೈತರಿಗೆ ಮುಟ್ಟಿಸಿ 300ಕ್ಕೂ ಹೆಚ್ಚು ಜನ ರೈತರು ಹುಲಿ ದೇಹವನ್ನು ಎಳೆದೊಯ್ದ ಸ್ಥಳದಲ್ಲಿ ಬಿಡಿಸಿಕೊಳ್ಳಲು ಹರ ಸಾಹಸ ಪಟ್ಟರೂ ಮೃತನ ದೇಹವನ್ನು ಬಿಡದೆ ಎಳೆದೊಯ್ದಿದೆ.

ಹುಲಿಯ ಬಾಯಿಗೆ ತುತ್ತಾಗಿ ತಿಂಗಳು ಕಳೆಯದಿರುವಾಗಲೇ ಹಾಗೂ ನಂಜನಗೂಡು ತಾಲೂಕಿನ ನಾಗಣಾಪುರ ಕಾಲೋನಿಯ ಸಣ್ಣಯ್ಯ ಎಂಬಾತನ ಮೇಲೆರಗಿ ಗಾಯಗೊಳಿಸಿ ವಾರ ಕಳೆಯುವಾಗಲೇ ಮತ್ತೊಬ್ಬ ಹಾದನೂರು ಗ್ರಾಮದ ರೈತ ಶಿವಣ್ಣನನ್ನು ಬಲಿತೆಗೆದುಕೊಂಡಿರುವುದರಿಂದ ಆತಂಕ ಸೃಷ್ಟಿಯಾಗಿದೆ.

See also  ಕೊಡಗು ಕಾಂಗ್ರೆಸ್‍ನಿಂದ 135ನೇ ಕಾಂಗ್ರೆಸ್ ಸಂಸ್ಥಾಪನಾ ದಿನಾಚರಣೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು