News Kannada
Tuesday, July 05 2022

ಕರ್ನಾಟಕ

ತೆಂಗಿನ ಮರ ನೆಲಕ್ಕುರುಳಿಸಿದ ಕಾಡಾನೆಗಳು - 1 min read

Photo Credit :

 ತೆಂಗಿನ ಮರ ನೆಲಕ್ಕುರುಳಿಸಿದ ಕಾಡಾನೆಗಳು

ಹನೂರು: ಮಲೈ ಮಹದೇಶ್ವರ ಬೆಟ್ಟ ವನ್ಯಜೀವಿ ವಿಭಾಗದ ಅರಣ್ಯ ಪ್ರದೇಶದಿಂದ ಹೊರಬಂದ ಕಾಡಾನೆಗಳು ತೆಂಗಿನ ತೋಟಕ್ಕೆ ನುಗ್ಗಿ ಮರಗಳನ್ನು ನಾಶ ಮಾಡಿರುವ ಘಟನೆ ಮಹದೇಶ್ವರಬೆಟ್ಟದ ದೀಪದ ಒಡ್ಡು ಸಮೀಪ ನಡೆದಿದೆ.

ಅಲ್ಲಿನ ನಿವಾಸಿ ರಾಜು ಎಂಬುವವರು 5ಎಕರೆ  ಪ್ರದೇಶದಲ್ಲಿ  350 ತೆಂಗಿನ ಮರಗಳನ್ನು ಬೆಳೆದಿದ್ದರು. ಈ ನಡುವೆ ತೋಟಕ್ಕೆ ನುಗ್ಗಿದ  ಕಾಡಾನೆಗಳ ಹಿಂಡು 50ಕ್ಕೂ ಹೆಚ್ಚು ತೆಂಗಿನ ಮರಗಳನ್ನು ನಾಶಪಡಿಸಿವೆ. ಇದರಿಂದ ಇದನ್ನೇ ನಂಬಿ  ಬದುಕುತ್ತಿದ್ದ ರೈತ ರಾಜು ಕಂಗಲಾಗಿದ್ದಾರೆ. ಆನೆ ದಾಳಿಯಿಂದ ತೋಟದ ಮಧ್ಯದಲ್ಲಿ ಹಾದು ಹೋಗಿದ್ದ  ವಿದ್ಯುತ್ ತಂತಿಗಳು  ತುಂಡಾಗಿ ಬಿದ್ದಿದೆ. ಇದೇ ಸಂದರ್ಭದಲ್ಲಿ ಬೆಳೆ ನಾಶಪಡಿಸಿ ಹಿಂತಿರುಗುತ್ತಿದ್ದ  ಕಾಡಾನೆಗಳಿಗೆ ವಿದ್ಯುತ್ ತಂತಿ ತಗುಲಿದ್ದರಿಂದ ಅವು ಹೆದರಿ ಪರಾರಿಯಾಗಿವೆ.

ಅರಣ್ಯಾಧಿಕಾರಿಗಳು ಸೂಕ್ತ ಕ್ರಮ ಕೈಗೊಂಡು, ಸರ್ಕಾರದಿಂದ ಸಿಗುವ ಪರಿಹಾರವನ್ನು ದೊರಕಿಸಿಕೊಡುವಂತೆ ವಿವೇಕಾನಂದ ಯುವಕ ಸಂಘದ ಅಧ್ಯಕ್ಷ ನಾಗೇಂದ್ರ, ಬಾಹುಬಲಿ ಯುವಕ ಸಂಘದ ಅಧ್ಯಕ್ಷ ಯೋಗೇಶ್, ಸದಸ್ಯರಾದ ವೆಂಕಟೇಶ್ ಒತ್ತಾಯಿಸಿದ್ದಾರೆ.

See also  ಕರಾವಳಿ ಉತ್ಸವದ ಅಂಗವಾಗಿ ವಿವಿಧ ತಳಿಯ ಶ್ವಾನ ಪ್ರದರ್ಶನ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು