News Kannada
Wednesday, July 06 2022

ಕರ್ನಾಟಕ

ದೇಶದಲ್ಲಿ ಮತಾಂತರ ನಿಲ್ಲಲಿ: ಪೇಜಾವರ ಶ್ರೀ - 1 min read

Photo Credit :

ದೇಶದಲ್ಲಿ ಮತಾಂತರ ನಿಲ್ಲಲಿ: ಪೇಜಾವರ ಶ್ರೀ

ನಂಜನಗೂಡು: ದೇಶದಲ್ಲಿ ಮೊದಲಿಗೆ ನಡೆಯುತ್ತಿರುವ ಮತಾಂತರ ನಿಲ್ಲಬೇಕು ಈ ದಿಕ್ಕಿನಲ್ಲಿ ಯುವ ಸಮುದಾಯ ಕಾರ್ಯನ್ಮುಖರಾಗಬೇಕು ಎಂದು ಉಡುಪಿ ಕೃಷ್ಣ ಮಠದ ಶ್ರೀ ಪೇಜಾವರ ವಿಶ್ವೇಶ್ವರತೀರ್ಥ ಪಾದಂಗಳರವರು ಅಭಿಪ್ರಾಯಪಟ್ಟರು.


ಅವರು ಉಡುಪಿಯ ಪರ್ಯಾಯ ಪೀಠ ಅಲಂಕರಿಸುವ ಐದನೇ ಬಾರಿ ಭಾಗವಹಿಸುವ ಮುನ್ನ ನಂಜನಗೂಡು ಪಟ್ಟಣದ ಶ್ರೀ ಕೃಷ್ಣಧಾಮ, ಹಾಗೂ ಶ್ರೀ ರಾಘವೇಂದ್ರ ಸ್ವಾಮಿಗಳವರ ಮೂಲ ಮಠಕ್ಕೆ ಆಗಮಿಸಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು.

ಇತ್ತೀಚಿನ ದಿನಗಳಲ್ಲಿ ಅಸಹಿಷ್ಣತೆ ಎಂಬುವುದು ಹೆಚ್ಚಾಗಿ ಪ್ರಸ್ತಾಪವಾಗುತ್ತೀದ್ದು ಅದು ಕೇವಲ ಹಿಂದು ಧರ್ಮದಲ್ಲಿ ಮಾತ್ರವಲ್ಲ ಮುಸ್ಲಿಂ ಧರ್ಮ ಸೇರಿದಂತೆ ಇತರರ ಧರ್ಮಗಳಲ್ಲಿಯೂ ಇದೆ. ಅಲ್ಲದೇ ಅಸಹಿಷ್ಣತೆಯು ಹಿಂದಿನಿಂದಲೂ ನಡೆದು ಬಂದಿದೆ. ಆದರೆ ಅದಕ್ಕೆ ಇತ್ತೀಚಿಗೆ ಹೆಚ್ಚಾಗಿ ಪ್ರಚಾರ ನೀಡಲಾಗುತ್ತಿದೆ . ಇಂದು ಧರ್ಮವನ್ನು ಉಳಿಸಿ ಬೆಳೆಸುವ ಸಂಕಲ್ಪವನ್ನು ಪ್ರತಿಯೊಬ್ಬ ಭಾರತೀಯರು ಮಾಡಬೇಕು. ಸಹಬಾಳ್ವೆಯಿಂದ ದೇಶದ ಅಭಿವೃದ್ದಿ ಸಾಧ್ಯ ಎಂದರು.

ಅವರೊಂದಿಗೆ ಶ್ರೀ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿಗಳವರು ಆಗಮಿಸಿದ್ದರು. ಶ್ರೀ ಮಠದ ವ್ಯವಸ್ಥಾಪಕರಾದ ರಾಜ ಸುಧೀಂದ್ರಚಾರ್. ಪಂಡಿತ ಸುಧಾಕರ್, ಧರ್ಮಾಧಿಕಾರಿ ರಾಜ ವ್ಯಾಸರಾಜಚಾರ್, ಶಂಕರ ಮಠದ ಆಡಳಿತ ಮಠದ ಧರ್ಮಾಧಿಕಾರಿ ಶ್ರೀಕಂಠ ಜೋಯಿಸ್ಸು, ಜಯರಾಮಚಾರ್,  ಭಾರಧ್ವಾಜ್ ಚಾರ್, ಸುಬ್ಬಲಕ್ಮೀ ಹಾಗೂ ಶ್ರೀ ಕೃಷ್ಣಧಾಮದ ಗುರುರಾಜಧರ್ಮ, ಶಿಲ್ಪಗುರುಪ್ರಸಾದ್. ಸಿಬ್ಬಂದಿವರ್ಗ ಶ್ರೀ ಮಠದ ಅಂತರಂಗ ಭಕ್ತರು ಹಾಜರಿದ್ದರು.

See also  ಮಡಿಕೇರಿ: ಕಾರು ಮಗುಚಿ ಹರಿಯಾಣ ಮೂಲದ ಮಹಿಳೆ ಸಾವು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು