News Kannada
Thursday, July 07 2022

ಕರ್ನಾಟಕ

ಮಡಿಕೇರಿ ಗಲಭೆ: ಶಾಹುಲ್ ಹಮೀದ್ ಹತ್ಯೆಗೈದ ಹಂತಕರ ಬಂಧನ - 1 min read

Photo Credit :

ಮಡಿಕೇರಿ ಗಲಭೆ: ಶಾಹುಲ್ ಹಮೀದ್ ಹತ್ಯೆಗೈದ ಹಂತಕರ ಬಂಧನ

ಮಡಿಕೇರಿ: ಮಡಿಕೇರಿಯಲ್ಲಿ ನ.10ರಂದು ಟಿಪ್ಪು ಜಯಂತಿ ಆಚರಣೆ ಸಂದರ್ಭ ನಡೆದ ಶಾಹುಲ್ ಹಮೀದ್ ಹತ್ಯೆಗೆ ಸಂಬಂಧಿಸಿದಂತೆ ಮೂವರು ಹಂತಕರನ್ನು ಕೊಡಗು ಜಿಲ್ಲಾ ಪೊಲೀಸರು ಬಂಧಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಸ್ಪಿ ವರ್ತಿಕಾ ಕಟಿಯಾರ್ ಟಿಪ್ಪು ಜಯಂತಿಯ ಸಂದರ್ಭ ಗಲಭೆ ನಡೆದು ವಿಶ್ವ ಹಿಂದೂ ಪರಿಷತ್ ಮುಖಂಡ ಕುಟ್ಟಪ್ಪ ಮೃತಪಟ್ಟವಿಚಾರ ತಿಳಿದು ದ್ವೇಷ ಸಾಧಿಸುವ ಉದ್ದೇಶದಿಂದ ಈ ಕೃತ್ಯ ಎಸಗಲಾಗಿದೆ. ಬೋಯಿಕೇರಿ ನಿವಾಸಿ ಪಿ.ಯು.ಕಾವೇರಪ್ಪ ಅಲಿಯಾಸ್ ಕವನ್(31), ಮಡಿಕೇರಿ ನಗರದ ದೇಚೂರು ನಿವಾಸಿ ಎಸ್.ಎಚ್. ಭೀಷ್ಮ ಅಲಿಯಾಸ್ ನಂದ(36)  ಹಾಗೂ ನಗರದ ಸುದರ್ಶನ ಬಡಾವಣೆ ನಿವಾಸಿ ಕೆ.ಆರ್.ರಮೇಶ್ ಬಂಧಿತ ಆರೋಪಿಗಳು.

ನ.10 ರಂದು ಚಾಲಕನಾಗಿರುವ ರಮೇಶ್ ಹಾಗೂ ಕಾವೇರಪ್ಪ, ಭೀಷ್ಮನ ಸಂಪರ್ಕ ಬೆಳೆಸಿ ಮೊಬೈಲ್ ಮೂಲಕ ಕರೆ ಮಾಡಿ ಬಂದೂಕು ತರುವಂತೆ ತಿಳಿಸಿದ್ದಾರೆ. ನಂತರ ಕೆಎ 12-ಪಿ.9925 ಕಪ್ಪು ಬಣ್ಣದ ಅಲ್ಟೋ ಕಾರಿನಲ್ಲಿ ರಮೇಶ್ ಮತ್ತು ಕಾವೇರಪ್ಪ, ಭೀಷ್ಮನ ಮನೆಗೆ ತೆರಳಿ ಆತನೊಂದಿಗೆ ರೈಫಲ್ ಸಹಿತ ಮಡಿಕೇರಿ ನಗರ ಸಮೀಪದ ಸಿದ್ದಾಪುರ ರಸ್ತೆಯ ಅರಣ್ಯ ಪ್ರದೇಶವೊಂದಕ್ಕೆ ಬಂದು ಗುಂಡು ಹಾರಿಸಲು ಹೊಂಚು ಹಾಕಿ. ಆರೋಪಿ ಕಾವೇರಪ್ಪ ದಾರಿಯಲ್ಲಿ ಹೋಗುತ್ತಿದ್ದ ವಾಹನದಲ್ಲಿದ್ದವರತ್ತ ಗುರಿಯಾಗಿರಿಸಿಕೊಂಡು ಗುಂಡು ಹಾರಿಸಿದ್ದು, ಒಂದು ಗುಂಡು ನೆಲಕ್ಕೆ ತಾಗಿದರೆ, ಮತ್ತೊಂದು ಜೀಪೊಂದರ ಎದುರು ಭಾಗಕ್ಕೆ ತಗುಲಿದೆ. ಮೂರನೇ ಗುಂಡು ಲಾರಿಯಲ್ಲಿ ಪ್ರಯಾಣಿಸುತ್ತಿದ್ದ ಶಾಹುಲ್ ಹಮೀದ್ಗೆ ತಗುಲಿದೆ.

ಬಳಿಕ ಆರೋಪಿಗಳಾದ ಕಾವೇರಪ್ಪ ಹಾಗೂ ಭೀಷ್ಮ ಅರಣ್ಯದ ಮೂಲಕ ಮೇಕೇರಿವರೆಗೆ ಸುಮಾರು 6 ಕಿ.ಮೀ. ದೂರ ಓಡಿ ಮಧ್ಯಾಹ್ನ 3 ಗಂಟೆಗೆ ತಲುಪುತ್ತಾರೆ. 3.15ಕ್ಕೆ ಚಾಲಕ ರಮೇಶ್ಗೆ ಕರೆ ಮಾಡಿ ಮೇಕೇರಿಗೆ ಬರುವಂತೆ ತಿಳಿಸುತ್ತಾರೆ. ಅಲ್ಲಿಂದ ಮೂವರು ಕುಟ್ಟಪ್ಪ ಅವರ ಮೃತದೇಹ ಇಟ್ಟಿದ್ದ ಜಿಲ್ಲಾ ಆಸ್ಪತ್ರೆಯ ಶವಗಾರಕ್ಕೆ ಬಂದು ತಲುಪುತ್ತಾರೆ. ನಂತರ ಭೀಷ್ಮ ಅದೇ ಕಾರಿನಲ್ಲಿ ಬಂದೂಕು ಸಹಿತ ಮನೆಗೆ ಮರಳುತ್ತಾನೆ.

ಸುಮಾರು 34 ದಿನಗಳ ತೀವ್ರ ತನಿಖೆಯ ಬಳಿಕ ಖಚಿತ ಮಾಹಿತಿಯನ್ವಯ ಡಿ.15 ರಂದು ಬೆಳಿಗ್ಗೆ ಮಡಿಕೇರಿ ನಗರದ ಮಂಗೇರಿರ ಮುತ್ತಣ್ಣ ವೃತ್ತದಲ್ಲಿ ಆರೋಪಿ ಚಾಲಕ ರಮೇಶನನ್ನು ಬಂಧಿಸಿದ ಪೊಲೀಸರು ನಂತರ ಕಾಟಕೇರಿಯಲ್ಲಿ ಇಬ್ಬರು ಆರೋಪಿಗಳಾದ ಕಾವೇರಪ್ಪ ಹಾಗೂ ಭೀಷ್ಮನನ್ನು ಬಂಧಿಸಿ, ಕೃತ್ಯಕ್ಕೆ ಬಳಸಿದ್ದ ಬಂದೂಕು ಹಾಗೂ ಆಲ್ಟೋ ಕಾರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿರುವುದಾಗಿ ತಿಳಿಸಿದ್ದಾರೆ.

ಕಾರ್ಯಾಚರಣೆಯಲ್ಲಿ ಡಿವೈಎಸ್ಪಿ ರಾಜಶೇಖರ್ ನೇತೃತ್ವದಲ್ಲಿ ಮಡಿಕೇರಿ ಗ್ರಾಮಾಂತರ ವೃತ್ತ ನಿರೀಕ್ಷಕರಾದ ಕರೀಂ ರಾವುತರ್, ಗೋಣಿಕೊಪ್ಪಲು ವೃತ್ತ ನಿರೀಕ್ಷಕರಾದ ರಾಜು, ಎಎಸ್ಐ ಹಮೀದ್, ಸಿಬ್ಬಂದಿ ಯೋಗೇಶ್, ನಿರಂಜನ್, ತೀರ್ಥಕುಮಾರ್, ಸತೀಶ್, ಶೇಖರ್, ರವಿ, ಮಂಜು, ತಮ್ಮಯ್ಯ, ಲಿಂಗರಾಜು, ರಾಜು, ವೆಂಕಟೇಶ್, ಪೂವಣ್ಣ, ಗಿರೀಶ್, ರಾಜೇಶ್, ಸುನಿಲ್, ಜೋಸ್ ಹಾಗೂ ಮಹಮದಾಲಿ  ಪಾಲ್ಗೊಂಡಿದ್ದರು ಎಂದು ತಿಳಿಸಿದರು.

See also  ಮದ್ಯದ ಅಮಲಿನಲ್ಲಿ ಮಾಜಿ ಸೈನಿಕನಿಂದ ಗುಂಡಿನ ದಾಳಿ: ತಮ್ಮನ ಮಗ ಸಾವು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು