News Kannada
Wednesday, July 06 2022

ಕರ್ನಾಟಕ

ಸಾಲಬಾಧೆಯಿಂದ ರೈತ ಆತ್ಮಹತ್ಯೆ - 1 min read

Photo Credit :

ಸಾಲಬಾಧೆಯಿಂದ ರೈತ ಆತ್ಮಹತ್ಯೆ

ಕನಕಪುರ: ಸಾಲಬಾಧೆ ತಾಳಲಾರದೆ ರೈತನೊಬ್ಬ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೊಳ್ಳಿಗನಹಳ್ಳಿ ಗ್ರಾಮ ಸಮೀಪದ ಗೋಪಳ್ಳಿ ಗ್ರಾಮದಲ್ಲಿ ನಡೆದಿದೆ.

ಕೊಳ್ಳಿಗನಹಳ್ಳಿ ಗ್ರಾಮದ ಸೋಮಣ್ಣ (58) ಸಾವನ್ನಪ್ಪಿದ ರೈತ. ಕೊಳ್ಳಿಗನಹಳ್ಳಿನ ಗ್ರಾಮದ ಹೊಳೆಯಾಚೆ ಗ್ರಾಮದ ಗೋಪಳ್ಳಿಗೆ ಸೇರಿದ ತೋಟದ ಮನೆಯಲ್ಲಿ ಕೃಷಿ ಚಟುವಟಿಕೆ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ರೈತ ಇತ್ತೀಚೆಗೆ ಜಮೀನಿನಲ್ಲಿ ಬೆಳೆಗಳನ್ನು ಬೆಳೆದು ಕೃಷಿಗೆ ಸಾಕಷ್ಟು ನೀರಿನ ಸೌಲಭ್ಯವಿಲ್ಲದೆ ಬೆಳೆಗಳು ನಾಶವಾಗಿದ್ದವು. ಕೃಷಿಗಾಗಿ ವಿಎಸ್ಎಸ್ಎನ್ ಬ್ಯಾಂಕ್ನಿಂದ ಸಾಲ ಹಾಗೂ ಮನೆಯ ಚಿನ್ನಾಭರಣಗಳನ್ನು ಬ್ಯಾಂಕಿನಲ್ಲಿ ಅಡಮಾನವಿಟ್ಟು ಸಾಲಕ್ಕೆ ಒಳಗಾಗಿದ್ದ ಎಂದು ಹೇಳಲಾಗಿದೆ.

ಇದರ ನಡುವೆಯೇ ತನ್ನ ಮೂರು ಜನ ಹೆಣ್ಣುಮಕ್ಕಳಿಗೆ ಮದುವೆ-ಮುಂಜಿ ಮಾಡಿ ಅದಕ್ಕೂ ಸಹ ಕೈಸಾಲಗಳನ್ನು ಮಾಡಿಕೊಂಡಿದ್ದ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ತಾನು ನಂಬಿದ್ದ ಬೆಳೆಯಲ್ಲಿ ಲಾಭ ಕಾಣದ ರೈತ ನಷ್ಟಕ್ಕೊಳಗಾಗಿ ಜೀವನದಲ್ಲಿ ಬೇಸತ್ತು ಆತ್ಮಹತ್ಯೆಗೆ ಶರಣಾಗಿದ್ದಾನೆ. ಜಮೀನಿನ ತೊಗರಿ ಗಿಡಕ್ಕೆ ಸಿಂಪಡಿಸಲು ತಂದಿದ್ದ ಔಷಧಿಯನ್ನು ಮದ್ಯದೊಂದಿಗೆ ಸೇರಿಸಿಕೊಂಡು ಶನಿವಾರ ಸೇವಿಸಿದ್ದನು.

ತೋಟದ ಮನೆಯಲ್ಲಿ ವಿಷ ಸೇವಿಸಿ ಬಿದ್ದು ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದ ಈತನನ್ನು ಕುಟುಂಬಸ್ಥರು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಮನೆಗೆ ವಾಪಾಸ್ಸಾಗುವ ಮಾರ್ಗ ಮಧ್ಯದಲ್ಲಿ ಮೃತಪಟ್ಟಿದ್ದಾನೆ.
ಘಟನೆಯನ್ನು ಕುರಿತು ಬಿಡದಿ ಪೊಲೀಸ್ ಠಾಣಾಧಿಕಾರಿ ಲೋಹಿತ್ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ. ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಯ ನಂತರ ಶವವನ್ನು ಕುಟುಂಬಸ್ಥರಿಗೆ ನೀಡಿದ್ದಾರೆ. ತೀವ್ರ ತೊಂದರೆ ಅನುಭವಿಸುತ್ತಿದ್ದ ರೈತ ಸೋಮಣ್ಣ ಸಾಲ-ಸೋಲ ಮಾಡಿ ಆತ್ಮಹತ್ಯೆ ಮಾಡಿಕೊಂಡಿರುವುದರಿಂದ ಈತನ ಕುಟುಂಬಕ್ಕೆ ಸರ್ಕಾರ ಪರಿಹಾರ ನೀಡಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

 

See also  ಅಕ್ರಮ ಮದ್ಯ ಮಾರಾಟ: ಆರೋಪಿ ಬಂಧನ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು