ಮಡಿಕೇರಿ: ಕ್ರೀಡಾ ಜಿಲ್ಲೆ ಕೊಡಗು ಜಿಲ್ಲೆಯಲ್ಲಿ ಮತ್ತೆ ಹಾಕಿ ಹಬ್ಬಕ್ಕೆ ಸಕಲ ತಯಾರಿಗಳು ನಡೆಯುತ್ತಿದ್ದು, ಶಾಂತೆಯಂಡ ಕುಟುಂಬ ಈ ಬಾರಿಯ ಹಾಕಿ ಹಬ್ಬದ ನೇತೃತ್ವವನ್ನು ವಹಿಸಿಕೊಂಡಿದೆ.
ಸುಮಾರು 300 ಕುಟುಂಬಗಳ ಹಾಕಿ ತಂಡವನ್ನು ಸೇರಿಸುವ ಗುರಿಯಿಟ್ಟುಕೊಂಡಿದ್ದು, ಒಂದು ತಿಂಗಳ ಕಾಲ ಮಡಿಕೇರಿಯಲ್ಲಿ ಪಂದ್ಯಾಟವನ್ನು ಆಯೋಜಿಸಲು ಎಲ್ಲಾ ರೀತಿಯ ತಯಾರಿಯನ್ನು ನಡೆಸಿಕೊಂಡಿದ್ದಾರೆ. ಕೊಡಗು ಜಿಲ್ಲೆಯಲ್ಲಿ ವರ್ಷಂಪ್ರತಿ ಕೊಡವ ಕುಟುಂಬಗಳ ಮಧ್ಯೆ ನಡೆಯುವ ಹಾಕಿ ಪಂದ್ಯಾಟವನ್ನು ಕೊಡವ ಕುಟುಂಬಗಳು ನಡೆಸಿಕೊಂಡು ಬರುತ್ತಿದ್ದು, ಈ ಬಾರಿ ಶಾಂತೆಯಂಡ ಕುಟುಂಬಸ್ಥರು ನಡೆಸಲಿದ್ದಾರೆ. ಹಾಕಿ ಹಬ್ಬದ ಪ್ರಥಮ ಹಂತವಾಗಿ ಗುರುವಾರ ಭೂಮಿ ಪೂಜೆ ನಡೆಯಿತು.
ಈ ಬಾರಿ ಮಡಿಕೇರಿಯಲ್ಲಿ ಹಾಕಿ ಹಬ್ಬವನ್ನು ನಡೆಸಲು ಶಾಂತೆಯಂಡ ಕುಟುಂಬಸ್ಥರು ನಿರ್ಧರಿಸಿದ್ದು, ಮಡಿಕೇರಿಯ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿ ಮೈದಾನದಲ್ಲಿ ಏ.10 ರಿಂದ ಮೇ.10 ವರೆಗೆ ಸುಮಾರು ಒಂದು ತಿಂಗಳ ಕಾಲ ಹಾಕಿ ಕ್ರೀಡೆಯನ್ನು ಆಯೋಜಿಸಲಾಗಿದೆ. ಎಂದು ಶಾಂತೆಯಂಡ ಕುಟುಂಬದ ಪ್ರಮುಖ ಶಾಂತೆಯಂಡ ರವಿ ಕುಶಾಲಪ್ಪ ತಿಳಿಸಿದ್ದಾರೆ.
ಗುರುವಾರ ಕಾಲೇಜಿನ ಮೈದಾನಕ್ಕೆ ಭೂಮಿ ಪೂಜೆ ನೆರವೇರಿಸಿದ ಶಾಂತೆಯಂಡ ಕುಟುಂಬಸ್ಥರು, ಮೈದಾನ ನಿಮರ್ಾಣದ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಬಗ್ಗೆ ಮಾಹಿತಿ ನೀಡಿದ ಶಾಂತೆಯಂಡ ಹಾಕಿ ಹಬ್ಬದ ಪ್ರಮುಖ ಶಾಂತೆಯಂಡ ರವಿ ಕುಶಾಲಪ್ಪ ಮಾಹಿತಿ ನೀಡಿದರು.