ಬಾಗಲಕೋಟೆ: ಮೂರುವರೆ ವರ್ಷದ ಹಿಂದೆ ತೋಡಿದ ಕೊಳವೆ ಬಾವಿಯಿಂದ ನೀರಿನ ಬದಲು ಬೆಂಕಿ ಹೊರ ಬರುತ್ತಿರುವ ವಿಚಿತ್ರ ಘಟನೆ ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಸೋರಗಾಂವಿಯಲ್ಲಿ ನಡೆದಿದೆ.
ಸೋರಗಾಂವಿ ಗ್ರಾಮದ ಭೀಮಪ್ಪ ಗೋಲಭಾವಿ ಅನ್ನೋ ರೈತನ ಹೊಲ್ಲದಲ್ಲಿನ ಕೊಳವೆಬಾವಿಯಿಂದ ಗ್ಯಾಸ್ ಹೊರ ಚಿಮ್ಮುತ್ತಿದ್ದು, ಕಡ್ಡಿ ಗೀರಿದ್ರೆ ಸಾಕು ಬೆಂಕಿ ಹೊತ್ತಿಕೊಳ್ಳುತ್ತೆ. ಮುಧೋಳ ಅಗ್ನಿಶಾಮಕದಳ ಸಿಬ್ಬಂದಿ ಕೊಳವೆ ಬಾವಿಗೆ ನೀರು ಬಿಟ್ಟು ಗ್ಯಾಸ್ ಚಿಮ್ಮೋದನ್ನು ಶಮನ ಮಾಡಿದ್ರೂ ಮತ್ತೆ ಗ್ಯಾಸ್ ಚಿಮ್ಮುತ್ತಿದ್ದು, ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ.