News Kannada
Wednesday, July 06 2022

ಕರ್ನಾಟಕ

ಪಿಲಿಕುಳಲ್ಲಿ ಹಬ್ಬದಲ್ಲಿ ಸಾಂಸ್ಕೃತಿಕ ಸಂಭ್ರಮ - 1 min read

Photo Credit :

ಪಿಲಿಕುಳಲ್ಲಿ ಹಬ್ಬದಲ್ಲಿ  ಸಾಂಸ್ಕೃತಿಕ ಸಂಭ್ರಮ

ಮಡಿಕೇರಿ: ಮಂಗಳೂರು ಬಳಿಯ ಪಿಲಿಕುಳ ನಿಸರ್ಗಧಾಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೊಡಗಿನ ಕಲಾವಿದರು ವಿವಿಧ ಸಾಂಸ್ಕೃತಿಕ ಪ್ರದರ್ಶನ ನೀಡಿ ಗಮನಸೆಳೆದರು.


ಮಂಗಳೂರು ಸನಿಹದ ಡಾ. ಶಿವರಾಮ ಕಾರಂತ ಪಿಲಿಕುಳ ನಿಸರ್ಗಧಾಮ ಇದರ ಸಹಯೋಗದಲ್ಲಿ ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ಜನಮನಸೂರೆಗೊಳ್ಳುವ ಅರೆಭಾಷೆ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಕಲ್ಕೂರ ಪ್ರತಿಷ್ಠಾಪನಾ ಮಂಗಳೂರು ಇದರ ವತಿಯಿಂದ ಡಿಂಕಿ ಐಸ್ ಕ್ರೀಮ್ ತಿನ್ನುವ ಸ್ಫರ್ಧೆ, ಫಯರ್ಲೆಸ್ ಕುಕ್ಕಿಂಗ್ ಸ್ಫರ್ಧೆ ನಡೆದಿದ್ದು, ಇದರಲ್ಲಿ ಪಾಲ್ಗೊಂಡಿದ್ದ ವಿವಿಧ ತಂಡಗಳ ಸದಸ್ಯರು ತಮ್ಮ ಪ್ರತಿಭೆ ಮೆರೆದರು.

ಅಕಾಡೆಮಿಯ ವತಿಯಿಂದ ವಿದುಷಿ ಪ್ರಮೀಳಾ ಲೋಕೇಶ್ ಪುತ್ತೂರು ಇವರ ತಂಡದಿಂದ ಹೆಜ್ಜೆಗೆಜ್ಜೆ ನಿನಾದೊಳಗೆನುಟ್ಟು, ಮರಗೋಡು ಎಂ.ಪಿ.ದೇವಕಿ ತಂಡದವರಿಂದ ಕೋಲಾಟ, ಪುನಿತ್ ಎಂ.ಯು ಮೈಸೂರು ಗೌಡ ಯುವ ವೇದಿಕೆ ಇವರ ತಂಡದಿಂದ ಅರೆಭಾಷೆ ಜಾನಪದ ನೃತ್ಯ, ಸತೀಶ್ ಮತ್ತೆ ಬಳಗ ಅಮೆಜಿಂಗ್ ಗ್ರೂಫ್, ಮಂಗಳೂರು ಇವರಿಂದ ಸುಬೇದಾರ್ ಗುಡ್ಡೆಮನೆ ಅಪ್ಪಯ್ಯಗೌಡರ ಜೀವನ ಚರಿತ್ರೆ ಬಗ್ಗೆ ನೃತ್ಯ ರೂಪಕ, ಬೈಮನ ಸ್ಪರ್ಶ ಇವರಿಂದ ಅರೆಬಾಷೆ ಸೋಬಾನೆ, ತುಳಸಿ ಮೋಹನ್ ಮತ್ತು ಶಶಿಧರ ಮಾವಿನಕಟ್ಟೆ ಇವರಿಂದ ಅರೆಭಾಷೆ ಸುಗಮ ಸಂಗೀತ ಪ್ರದರ್ಶನ ಜನಮನ ಸೆಳೆಯಿತು.

ಅಕಾಡೆಮಿಯ ರಿಜಿಸ್ಟ್ರಾರ್  ಉಮರಬ್ಬ, ಅಕಾಡೆಮಿ ಅರ್ಥಸದಸ್ಯರಾದ  ಎಸ್.ಐ.ಬಾವಿಕಟ್ಟಿ, ಅಕಾಡೆಮಿ ಅಧ್ಯಕ್ಷ ಕೊಲ್ಯದ ಗಿರೀಶ್, ಅಕಾಡೆಮಿಯ ಸದಸ್ಯರಾದ ಡಾ.ಪೂವಪ್ಪ ಕಣಿಯೂರು,  ಮಂದ್ರೀರ ಮೋಹನ್ ದಾಸ್, ಡಾ.ಕೋರನ ಸರಸ್ವತಿ ಇವರು ಹಾಗೂ ಪಿಲಿಕುಳ ನಿಸರ್ಗಧಾಮದ ಕಾರ್ಯನಿರ್ವಾಹಕ ನಿರ್ದೇಶಕರಾದ  ಎಸ್.ಎ.ಪ್ರಭಾಕರ ಶರ್ಮ, ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಬಿ.ಎ.ಮಹಮ್ಮದ್ ಹನೀಫ್, ಕಲ್ಕೂರ ಪ್ರತಿಷ್ಠಾನ ಅಧ್ಯಕ್ಷರು  ಪ್ರದೀಪ್ ಕುಮಾರ್ ಕಲ್ಕೂರ, ಡಾ.ಕೆ.ವಿ.ರಾವ್ ಪ್ರಾದೇಶಿಕ ವಿಜ್ಞಾನ ಕೇಂದ್ರ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ರಿಜಿಸ್ಟ್ರಾರ್ ಚಂದ್ರಹಾಸ್ ರೈ ಇವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

See also  ಅಪ್ರಾಪ್ತೆಯ ಪ್ರಜ್ಞೆ ತಪ್ಪಿಸಿ ಅಪಹರಣ: ಐವರ ವಿರುದ್ಧ ದೂರು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು