News Kannada
Tuesday, July 05 2022

ಕರ್ನಾಟಕ

ಸಮಸ್ಯೆ ಸೃಷ್ಟಿಸಿರುವ ರಸ್ತೆಯಲ್ಲೇ ಒಕ್ಕಣೆ - 1 min read

Photo Credit :

ಸಮಸ್ಯೆ ಸೃಷ್ಟಿಸಿರುವ ರಸ್ತೆಯಲ್ಲೇ ಒಕ್ಕಣೆ

ಹುಣಸೂರು: ಹುಣಸೂರು ತಾಲೂಕಿನ ತೆರಕಣಾಂಬಿ-ರಾಮನಾಥಪುರ ರಾಜ್ಯ ಹೆದ್ದಾರಿ 86ರ ರಸ್ತೆಯಲ್ಲಿ ಒಕ್ಕಣೆ ಮಾಡುವುದರಿಂದ ವಾಹನ ಸಂಚರಿಸಲು ಪರದಾಡುವಂತಾಗಿದೆ.


ಹುಣಸೂರಿನಿಂದ ಹಿರೀಕ್ಯಾತನಹಳ್ಳಿ-ಮಳಲಿ-ಮಾವತ್ತೂರು-ಚುಂಚನಕಟ್ಟೆ ಮಾರ್ಗವಾಗಿ ಹಾದು ಹೋಗಿರುವ ರಸ್ತೆ ಕಿರಿದಾಗಿದ್ದು ರಸ್ತೆಯನ್ನು ಬಿಟ್ಟು ರಸ್ತೆ ಬದಿಯಲ್ಲಿ ಹೋಗ ಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ರೈತರು ತಮ್ಮ ತಮ್ಮ ಜಮೀನುಗಳಲ್ಲಿ ಬೆಳೆದ ಹುರುಳಿ ತೊಗರಿ, ಉದ್ದು, ರಾಗಿ, ಜೋಳ, ಅಲಸಂದೆ ಮೊದಲಾದ ಬೆಳೆಗಳನ್ನು ರಸ್ತೆಯಲ್ಲೇ ಸುರಿದು  ಒಕ್ಕಣೆ ಮಾಡುತ್ತಿರುವುದರಿಂದ ಭಾರೀ ವಾಹನಗಳಿಗೆ ತೊಂದರೆ ಉಂಟಾಗದಿದ್ದರೂ ದ್ವಿಚಕ್ರ ಹಾಗೂ ನಾಲ್ಕುಚಕ್ರಗಳ ವಾಹನಗಳಿಗೆ ಭಾರೀ ತೊಂದರೆಯಾಗುತ್ತಿದ್ದು, ಅಪಘಾತಗಳಿಗೆ ಎಡೆ ಮಾಡಿ ಕೊಡುತ್ತಿದೆ. ಮೊದಲೆಲ್ಲಾ ಜಮೀನು, ಮನೆ ಬಳಿ ಒಕ್ಕಣೆ ಮಾಡುತ್ತಿದ್ದ ಕೆಲವು  ರೈತರು ಇದೀಗ ರಸ್ತೆಗಳಲ್ಲೇ ಹಾಕುತ್ತಿರುವುದರಿಂದ ವಾಹನ ಸವಾರರಿಗೆ ತೊಂದರೆಯಾಗುತ್ತಿದೆ.

ವಾಹನಗಳ ಚಕ್ರಗಳಲ್ಲಿ ಅಂಟಿಕೊಂಡಿರುವ ಕ್ರಿಮಿ ಕೀಟಗಳು ರಸ್ತೆಗಳಲ್ಲಿ ಹಾಕಿರುವ ಧವಸ ಧಾನ್ಯಗಳಿಗೆ ಅಂಟಿಕೊಂಡು ರೋಗಗಳಿಗೂ ಕಾರಣವಾಗುತ್ತಿದೆ. ಈಗಾಗಲೇ ಅಲ್ಲಲ್ಲಿ ಸರ್ಕಾರ ಕಣದ ವ್ಯವಸ್ಥೆ ಮಾಡಿದ್ದರೂ ಅದನ್ನು ಸದುಪಯೋಗಪಡಿಸಿಕೊಳ್ಳದೆ ರೈತರು ರಸ್ತೆಯಲ್ಲೇ ಒಕ್ಕಣೆ ಮಾಡುತ್ತಿರುವುದು ಒಳ್ಳೆಯ ಬೆಳವಣಿಗೆ ಅಲ್ಲ. ಸಂಬಂಧಿಸಿದವರು ಇದನ್ನು ತಡೆಯಬೇಕಿದೆ.

See also  ನಾಗಮಂಗಲದ ದೊಮ್ಮಸಂದ್ರ ಅಣೆಕಟ್ಟಲ್ಲಿ ಜಲಲ ಜಲಧಾರೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು