ಸಾಲಿಗ್ರಾಮ: ಸಾಲದ ಬಾಧೆಯಿಂದ ಕೆ.ಆರ್.ನಗರ ತಾಲೂಕಿನ ಸಾಲಿಗ್ರಾಮ ಸಮೀಪದ ಕಾಳಮ್ಮನಕೊಪ್ಪಲು ಗ್ರಾಮದಲ್ಲಿ ಸುಮಾರು ಐವತ್ತೇಳು ವರ್ಷದ ಅಜ್ಜೇಗೌಡ ಎಂಬುವರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆಯು ನಡೆದಿದೆ.
ಮೃತರು ಕಳೆದ ಭಾನುವಾರ ತಮ್ಮ ಜಮೀನಿನಲ್ಲಿ ಕ್ರಿಮಿನಾಶಕವನ್ನು ಕುಡಿದು ಮೈಸೂರಿನ ಕೆ.ಆರ್.ಆಸ್ಪತ್ರೆಗೆ ದಾಖಲಾಗಿದ್ದರು ಆದರೆ ಚಿಕಿತ್ಸೆ ಫಲಕಾರಿಯಾಗದೆ ಅಸುನೀಗಿದ್ದಾರೆ. ಮೃತರಿಗೆ ಪತ್ನಿ, ಇಬ್ಬರು ಪುತ್ರರು ಹಾಗೂ ಒಬ್ಬಳು ಪುತ್ರಿ ಇದ್ದಾಳೆ.
ಮೃತ ರೈತರು ಸಾಲಿಗ್ರಾಮದ ಕನರ್ಾಟಕ ಬ್ಯಾಂಕ್ನಲ್ಲಿ ಮೂವತ್ತು ಸಾವಿರ ರೂ, ಹರದನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಮೂವತ್ತೈದು ಸಾವಿರ ರೂ ಹಾಗೂ ಖಾಸಗಿ ವ್ಯಕ್ತಿಗಳಿಂದ ಒಂದು ಲಕ್ಷಕ್ಕೂ ಹೆಚ್ಚು ಸಾಲಮಾಡಿದ್ದಾರೆಂದು ಕುಟುಂಬದ ಮೂಲಗಳು ತಿಳಿಸಿವೆ. ಮಾಡಿದ ಬೆಳೆಗಳು ಸರಿಯಾಗಿ ಬಾರದೆ ಸಾಲದ ಬಾಧೆ ತಾಳದೆ ಇಂತಹ ಅವಘಡವನ್ನು ಮಾಡಿಕೊಂಡಿದ್ದಾರೆಂದು ತಿಳಿದು ಬಂದಿದೆ. ಈ ಘಟನೆಯ ವಿಷಯ ತಿಳಿಯುತ್ತಿದ್ದಂತೆ ತಹಸೀಲ್ದಾರ್ ನಾಗರಾಜು, ಉಪತಹಸೀಲ್ದಾರ್ ತಿಮ್ಮಯ್ಯ, ರಾಜಸ್ವ ನಿರೀಕ್ಷಕರಾದ ವೇದಮೂತರ್ಿ, ಕೋಟೇಗೌಡ, ಗ್ರಾಮಲೆಕ್ಕಿಗ ಪ್ರಹ್ಲಾದ್ ಭೇಟಿ ನೀಡಿ ಪರಿಶೀಲನೆ ಮಾಡಿದರು. ಈ ಸಂಬಂಧ ಸಾಲಿಗ್ರಾಮ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ಮುಂದಿನ ಕ್ರಮಕೈಗೊಂಡಿದ್ದಾರೆ.
ಪರಿಹಾರ ವಿತರಣೆ: ರೈತ ಅಜ್ಜೇಗೌಡ ಆತ್ಮಹತ್ಯೆಯ ಸುದ್ದಿಯು ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಉದ್ಯಮಿ ಹಾಗೂ ಜಾ.ದಳ ಮುಖಂಡ ಸಾ.ರಾ.ನಂದೀಶ್ ಕುಟುಂಬದವರಿಗೆ ಸಾಂತ್ವಾನ ಹೇಳಿ ವೈಯುಕ್ತಿಕವಾಗಿ ಹತ್ತು ಸಾವಿರ ರೂಗಳನ್ನು ಪರಿಹಾರವನ್ನು ಕುಟುಂಬಕ್ಕೆ ನೀಡಿದರು.