News Kannada

ಕರ್ನಾಟಕ

ಎಟಿಎಂ ಮಾಹಿತಿ ಪಡೆದು ವಂಚನೆ - 1 min read

ಎಟಿಎಂ ಮಾಹಿತಿ ಪಡೆದು ವಂಚನೆ

ಮಡಿಕೇರಿ: ರಾಜ್ಯದ ಹಲವೆಡೆಗಳಲ್ಲಿ ದೂರವಾಣಿ ಮೂಲಕ ಬ್ಯಾಂಕ್ ಖಾತೆಯ ವಿವರಗಳನ್ನು ಪಡೆದು ಬಳಿಕ ಅವರ ಖಾತೆಯಿಂದ ಹಣವನ್ನು ಡ್ರಾ ಮಾಡಿ ವಂಚಿಸುತ್ತಿರುವ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಅಂತಹದ್ದೇ ಒಂದು ಪ್ರಕರಣ ಮಡಿಕೇರಿಯಲ್ಲಿ ನಡೆದಿದೆ.

ಅಪರಿಚಿತ ವ್ಯಕ್ತಿಯೋರ್ವ ತಾನು ಬ್ಯಾಂಕ್ ವ್ಯವಸ್ಥಾಪಕ ಎಂಬುದಾಗಿ ನಂಬಿಸಿ ದೂರವಾಣಿ ಮೂಲಕ ನಗರದ ಮಹಿಳೆಯೊಬ್ಬರಿಂದ ಬ್ಯಾಂಕ್ ಖಾತೆಯ ವಿವರಗಳನ್ನು ಸಂಗ್ರಹಿಸಿ ಒಟ್ಟು 28.580 ರೂ.ಗಳನ್ನು ಡ್ರಾ ಮಾಡಿ ವಂಚಿಸಿದ ಘಟನೆ ಮಡಿಕೇರಿ ನಗರದಲ್ಲಿ ನಡೆದಿದೆ.

ನಗರದ ಗದ್ದಿಗೆ ಬಳಿಯ ನಿವಾಸಿ ಜುಬೈದ ಎಂಬುವವರು ನಗರದ ಇಂಡಿಯನ್ ಓವರ್ಸೀಸ್ ಬ್ಯಾಂಕಿನಲ್ಲಿ ತಮ್ಮ ಹಾಗೂ ತನ್ನ ಪತಿ ಹೆಸರಿನಲ್ಲಿ ಜಂಟಿ ಖಾತೆಯನ್ನು ಹೊಂದಿದ್ದು, ಜನವರಿ 6 ರಂದು ಜುಬೈದ ಅವರ ಮೊಬೈಲ್ಗೆ ಕರೆ ಮಾಡಿದ ವ್ಯಕ್ತಿಯೋರ್ವ  ಹಿಂದಿ ಹಾಗೂ ಕನ್ನಡ ಭಾಷೆಯಲ್ಲಿ ಮಾತನಾಡಿ, ನಾನು ಇಂಡಿಯನ್ ಓವರ್ಸೀಸ್ ಬ್ಯಾಂಕ್ ನ ಮ್ಯಾನೇಜರ್, ನಿಮ್ಮ ಎಟಿಎಂ ಕಾರ್ಡ್ ಬ್ಲಾಕ್ ಆಗಿದೆ, ಆದರಿಂದ ಎಟಿಎಂ ಕಾರ್ಡ್ ಹಾಗೂ ಪಿನ್ ನಂಬರ್ ಬಗ್ಗೆ ಮಾಹಿತಿ ಕೋಡಿ ಎಂದು ಕೇಳಿ ಪಿನ್ ನಂಬರ್ ಅನನ್ಉ ಪಡೆದುಕೊಂಡಿದ್ದಾನೆ. ಬಳಿಕ ಜುಬೈದ ಅವರ ಬ್ಯಾಂಕ್ ಖಾತೆಯಿಂದ ಕ್ರಮವಾಗಿ 8 ಬಾರಿ ಕಾರ್ಡ್ ಬಳಸಿ ಒಟ್ಟು 28,580 ರೂ ಹಣವನ್ನು ಡ್ರಾ ಮಾಡುವ ಮೂಲಕ ವಂಚಿಸಿದ್ದಾನೆ.

ಈ ಬಗ್ಗೆ ಅನುಮಾನಗೊಂಡ ಜುಬೈದ ಬ್ಯಾಂಕ್ ನಲ್ಲಿ ವಿಚಾರಿಸಿದಾಗ ಈ ವಂಚನೆ ಪ್ರಕರಣ ಬೆಳಕಿಗೆ ಬಂದಿದೆ. ಈ ಬಗ್ಗೆ ಮಡಿಕೇರಿ ನಗರ ಠಾಣೆಯಲ್ಲಿ ವಂಚನೆಗೊಳಗಾದ ಮಹಿಳೆ ಜುಬೈದ ದೂರು ನೀಡಿದ್ದು, ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು ಬಿರುಸಿನ ತನಿಖೆ ಕೈಗೊಂಡಿದ್ದಾರೆ. 

See also  ಶೀಘ್ರವೇ ಸಚಿವ ಸಂಪುಟ ವಿಸ್ತರಣೆ: ಸಿದ್ದರಾಮಯ್ಯ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು