News Kannada

ಕರ್ನಾಟಕ

ಟೆಂಪೋ ಡಿಕ್ಕಿ: ನೌಕರ ಸ್ಥಳದಲ್ಲೇ ಸಾವು - 1 min read

ಟೆಂಪೋ ಡಿಕ್ಕಿ: ನೌಕರ ಸ್ಥಳದಲ್ಲೇ ಸಾವು

ಹುಣಸೂರು: ಹುಣಸೂರು ಕೆ.ಆರ್.ನಗರ ಮುಖ್ಯ ರಸ್ತೆಯಲ್ಲಿ ನಡೆದು ಬರುತ್ತಿದ್ದ ಪಾದಚಾರಿಯೊಬ್ಬರಿಗೆ ಹಿಂಬದಿಯಿಂದ ಬಂದ ಟೆಂಪೋ ಲಾರಿ ಡಿಕ್ಕಿಹೊಡೆದ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ತಾಲೂಕಿನ ಗಾಡಡಗೆರೆ ಹೋಬಳಿ ಮನುಗನಹಳ್ಲಿ ಗ್ರಾಮದ ನಿವಾಸಿ ಜ್ಞಾನೇಶರಾವ್ ಕದಂ(48) ಮೃತಪಟ್ಟವರಾಗಿದ್ದಾರೆ. ಪತ್ನಿ ಇಬ್ಬರು ಮಕ್ಕಳಿದ್ದಾರೆ. ಹನಗೋಡು ಹೋಬಳಿ ದೊಡ್ಡಹೆಜ್ಜೂರಿನ ಸರ್ಕಾರಿ ಪ್ರೌಢಶಾಲೆಯಲ್ಲಿ ಗುಮಾಸ್ತರಾಗಿ ಕಾರ್ಯ ನಿರ್ವಹಿಸುತ್ತಿದ್ದ ಜ್ಞಾನೇಶ್ವ ರಾವ್ ಇತ್ತೀಚೆಗೆ ಹುಣಸೂರು ಪಟ್ಟಣದ ತಾಲೂಕು ಕಚೇರಿಯ ಕಂಟ್ರೋಲ್ ರೂಮಿನಲ್ಲಿ ಡೆಪ್ಯೂಟೇಷನ್ ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಶುಕ್ರವಾರ ಸಂಜೆ ಗಾವಡಗೆರೆಯ ತಮ್ಮ ಮನೆಯಿಂದ ಬಸ್ ನಿಲ್ದಾಣಕ್ಕೆ  ಹೋಗುತ್ತಿದ್ದ ವೇಳೆ ಕೆ.ಆರ್.ನಗರದಿಂದ ಹುಣಸೂರಿಗೆ ಈರುಳ್ಳಿ ತುಂಬಿಕೊಂಡು ಬರುತ್ತಿದ್ದ ಟೆಂಪೋ ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಮೃತಪಟ್ಟರು. ಟೆಂಪೋ ಡಿಕ್ಕಿ ಹೊಡೆದ ರಭಸಕ್ಕೆ ದೇಹ ಕನಿಷ್ಟ 30 ಅಡಿ ದೂರ ಬಿದ್ದಿದೆ.

ಟೆಂಪೋ ಚಾಲಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಮಾಲೀಕ ಹರೀಶ್ ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

See also  ಮತ್ತೆ ದೀಪಾವಳಿ ಬಂದಿದೆ... ಸಡಗರ ತಂದಿದೆ..
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು